Tuesday, January 21, 2025

ಹುಟ್ಟುತ್ತಲೇ ತೂಕದಿಂದ ದಾಖಲೆ ಬರೆದ ನವಜಾತ ಶಿಶು..! ಪೋಷಕರ ಸಂಭ್ರಮ

ಕೆನಡಾ: ಸಾಮಾನ್ಯವಾಗಿ ಆಗ ತಾನೇ ಹುಟ್ಟಿದ ಮಕ್ಕಳು ಎಷ್ಟು ತೂಕ ಹೊಂದಿರುತ್ತದೆ. ಹೆಚ್ಚೆಂದರೆ ಮೂರು ಕೇಜಿ ಅದಕ್ಕೂ ಹೆಚ್ಚೆಂದರೆ 4 ಕೆ.ಜಿ. ಆದರೆ ಕೆನಡಾದಲ್ಲಿ ಆಗ ತಾನೆ ಹುಟ್ಟಿದ ಮಗುವೊಂದು 6. 5 ಕೆಜಿ ತೂಗುವ ಮೂಲಕ ದಾಖಲೆ ಬರೆದಿದೆ. ಕೆನಡಾದಲ್ಲಿ ಮಹಿಳೆಯೊಬ್ಬರು 6.5 ಕೆಜಿ ತೂಗುವ ಮಗುವೊಂದಕ್ಕೆ ಸಿಸೇರಿಯನ್ ಮೂಲಕ ಜನ್ಮ ನೀಡಿದ್ದಾರೆ.

13 ವರ್ಷಗಳಲ್ಲೇ ಇಷ್ಟು ತೂಕದ ಮಗುವೊಂದು ಜನಿಸಿದ್ದು ಇದೇ ಮೊದಲಾಗಿದೆ. ಕೆನಡಾ ದಂಪತಿಗಳಾದ ಬ್ರಿಟ್ನಿ ಐರಿ ಹಾಗೂ ಚಾನ್ಸ್‌ ಐರಿ ತಮ್ಮ 5ನೇ ಮಗುವಿಗೆ ಜನ್ಮ ನೀಡಿದ್ದು, ಮಗುವಿನ ತೂಕದಿಂದಲೇ ಸುದ್ದಿಯಾಗಿದ್ದಾರೆ.

ಮಗುವಿನ ಆಗಮನದಿಂದ ಫೋಷಕರು ಫುಲ್ ಖುಷ್ ಆಗಿದ್ದಾರೆ. ಮಗುವಿಗೆ ಸೋನಿ ಐರಿ ಎಂದು ಹೆಸರಿಡಲಾಗಿದೆ.

ಸೋನಿ ಐರಿ ಸಾಮಾನ್ಯ ಮಕ್ಕಳಿಗಿಂತ ಎರಡು ಪಟ್ಟು ಹೆಚ್ಚು ತೂಗುತ್ತಿದ್ದು, ಲಡ್ಡುವಿನಂತಿದ್ದ ಮಗುವನ್ನು ನೋಡಿ ಆಸ್ಪತ್ರೆಯ ವೈದ್ಯರು, ನರ್ಸ್‌ಗಳು ಕೂಡ ಸಂತೋಷ ವ್ಯಕ್ತಪಡಿಸಿದ್ದರೆ. ಪೌಂಡ್‌ಗಳ ಲೆಕ್ಕದಲ್ಲಿ ಹೇಳುವುದಾದರೆ ಈ ಮಗು 14 ಪೌಂಡ್ 8 ಔನ್ಸ್‌ (ಅಂದಾಜು 6 ಕೆಜಿ 500 ಗ್ರಾಂ) ತೂಗುತ್ತಿತ್ತು. ಅಕ್ಟೋಬರ್ 23 ರಂದು ಕೇಂಬ್ರಿಡ್ಜ್‌ನ ಮೆಮೋರಿಯಲ್ ಆಸ್ಪತ್ರೆಯಲ್ಲಿ ಸೋನಿ ಐರಿ (Sonny Ayres) ಹುಟ್ಟಿದ್ದಾನೆ.

Related Articles

Latest Articles