Thursday, November 14, 2024

ಆರ್​ಸಿಬಿಗೆ ಬಿಗ್ ಶಾಕ್.. ಪ್ಲೇ ಆಫ್ ಕನಸು ಕಾಣ್ತಿರುವ ಬೆಂಗಳೂರಿಗೆ ನೆರವಾಗುತ್ತಾ ಹದಿನೆಂಟರ ನಂಟು? ಪಾಯಿಂಟ್ಸ್​ ಟೇಬಲ್​​ ಉಲ್ಟಾ-ಪಲ್ಟಾ..!

ನಿನ್ನೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ 2024ರ 67 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ 18 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

ಈ ಪಂದ್ಯದಲ್ಲಿ ಲಕ್ನೋ ಮುಂಬೈಗೆ 215 ರನ್‌ಗಳ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿದ ಮುಂಬೈ ತಂಡ 20 ಓವರ್‌ಗಳಲ್ಲಿ 196 ರನ್​ಗಳನ್ನಷ್ಟೇ ಗಳಿಸಿ ಸೋಲು ಅನುಭವಿಸಿತು. ಈ ಮೂಲಕ ಮುಂಬೈ ಇಂಡಿಯನ್ಸ್​, 2024ರ ಟೂರ್ನಿಯಲ್ಲಿ ಕೇವಲ 4 ಪಂದ್ಯ ಗೆದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.

ಗೆಲುವಿನ ಬೆನ್ನಲ್ಲೇ ಎಲ್​​ಎಸ್​ಜಿ ತಂಡವು ಪಾಯಿಂಟ್ಸ್​ ಟೇಬಲ್​ನಲ್ಲಿ ಒಂದು ಸ್ಥಾನ ಜಿಗಿತ ಕಂಡಿದೆ. 7ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಜಂಪ್ ಆಗಿದೆ. ಇನ್ನು, ನಮ್ಮ ಆರ್​ಸಿಬಿ 7ನೇ ಸ್ಥಾನಕ್ಕೆ ಕುಸಿದಿದೆ. ಇವತ್ತು ಆರ್​ಸಿಬಿ ಎಸ್​ಕೆ ವಿರುದ್ಧ ಪ್ಲೇ-ಆಫ್ ಡಿಸೈಡರ್ ಪಂದ್ಯವನ್ನಾಡಲಿದೆ.

ಇವತ್ತಿನ ಪಂದ್ಯದಲ್ಲಿ ಆರ್​ಸಿಬಿ ಸಿಎಸ್​ಕೆ ವಿರುದ್ಧ 18 ರನ್​ಗಳ ಅಂತರ ಅಥವಾ 18.1 ಓವರ್​ ಒಳಗೆ ಗೆಲುವು ಸಾಧಿಸಬೇಕಿದೆ. ಹೀಗಾದರೆ ಆರ್​ಸಿಬಿ ಪ್ಲೇ-ಆಫ್​​ಗೆ ಹೋಗಲಿದೆ. ಆರ್‌ಸಿಬಿ ಪಾಲಿಗೆ ಹದಿನೆಂಟು ಶುಭಲಕ್ಷಣ. ಇಂದು ತಾರೀಖು ಹದಿನೆಂಟು. ಹದಿನೆಂಟು ಅಂಕಗಳ ಜಯ ಬೇಕು. ವಿರಾಟ್ ಕೊಹ್ಲಿ ಜರ್ಸಿ ಸಂಖ್ಯೆಯು ಹದಿನೆಂಟು ಎಂಬುದು ವಿಶೇಷ.‌

Related Articles

Latest Articles