Monday, September 16, 2024

ನೋಡ ನೋಡುತ್ತಿದ್ದಂತೆ ಉರುಳಿ ಬಿದ್ದ 120 ಅಡಿ ಎತ್ತರದ ತೇರು

ಆನೇಕಲ್: ಬರೋಬ್ಬರಿ 120 ಅಡಿ ಉದ್ದದ ತೇರು ನಿಯಂತ್ರಣ ತಪ್ಪಿ ನೆಲಕ್ಕೆ ಉರುಳಿ ಬಿದ್ದ ಘಟನೆ ಹೀಲಲಿಗೆ ಗ್ರಾಮದಲ್ಲಿ ನಡೆದಿದೆ. ಹುಸ್ಕೂರಿನ ಮದ್ದೂರಮ್ಮ ಜಾತ್ರೆಗೆ ತೇರು ಬರುವುದು ವಾಡಿಕೆಯಗಿದೆ. ಹೀಲಲಿಗೆ ಗ್ರಾಮದಿಂದ 120 ಅಡಿ ಉದ್ದದ ತೇರು ಹುಸ್ಕೂರಿಗೆ ಬರುತ್ತಿತ್ತು

ಮೂರು ವರ್ಷಕ್ಕೊಮ್ಮೆ ಹುಸ್ಕೂರು ಮದ್ದೂರಮ್ಮ ಜಾತ್ರಾ ಮಹೋತ್ಸವ ನಡೆಯುತ್ತದೆ. ಕಳೆದ ಐದು ವರ್ಷಗಳ ಹಿಂದೆ 2019ರಲ್ಲಿ ಈ ಜಾತ್ರೆ ನಡೆದಿತ್ತು. ಈ ಜಾತ್ರೆಗೆ ಹುಸ್ಕೂರು ಸುತ್ತಮುತ್ತಲಿನ ಏಳು ಹಳ್ಳಿಗಳಿಂದ ಗ್ರಾಮಸ್ಥರು ತೇರು ಕಟ್ಟುತ್ತಾರೆ. ತಮ್ಮ ತಮ್ಮ ಊರುಗಳಿಂದ ತೇರನ್ನ ಕಟ್ಟಿ ಟ್ರಾಕ್ಟರ್​ಗಳ ಮೂಲಕ ಹುಸ್ಕೂರಿನ ಮದ್ದೂರಮ್ಮ ತರುತ್ತಾರೆ.

ಹೀಗಲಿಗೆ, ಗೂಳವಾಡಿ, ಕೊಡತಿ, ರಾಮಸಂದ್ರ, ಇಗಲೂರು, ಸೀಗೆನ ಅಗ್ರಹಾರ, ದೊಡ್ಡನಾಗಮಂಗಲ ಗ್ರಾಮಗಳಿಂದ ತೇರನ್ನ ಕರೆತರಲಾಗತ್ತದೆ. ಹತ್ತು ಲಕ್ಷ ಖರ್ಚು ಮಾಡಿ ಕಳೆದೊಂದು ತಿಂಗಳಿನಿಂದ ತಯಾರಿಸಿದ್ದ ಈಗಲಿಗೆ ಕುರ್ಜು ತೇರು ಇದಾಗಿತ್ತು.

ಈ ಬಾರಿಯೂ ಕೂಡ ಡಾಂಬರು ರಸ್ತೆಯಿಂದ ತೇರನ್ನ ಮಣ್ಣಿನ ರಸ್ತೆಗೆ ಇಳಿಸುತ್ತಿದ್ದಂತೆ ತೇರಿನ ಚಕ್ರ ವಾಲಿ 120 ಅಡಿಯ ಕುರ್ಜು ತೇರು ಕೆಳಗೆ ಉರುಳಿ ಬಿದ್ದಿದೆ. ಸದ್ಯ ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಎತ್ತುಗಳು ಮತ್ತು ಟ್ರಾಕ್ಟರ್‌ಗಳ ನೆರವಿನಿಂದ ತೇರನ್ನು ಎಳೆದು ತರಲಾಗುತ್ತಿತ್ತು. ನಿಯಂತ್ರಣ ತಪ್ಪಿ ತೇರು ಉರುಳಿ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಕಳೆದ ಬಾರಿ 2019ರಲ್ಲಿ ರಾಮಸಂದ್ರದ ತೇರನ್ನ ಕರೆತರುವ ವೇಳೆ ತೇರು ಅರ್ಧಕ್ಕೆ ವಾಲಿ ಮರದ ಮೇಲೆ ಬಿದ್ದಿತ್ತು.

Related Articles

Latest Articles