Sunday, May 18, 2025

ರತನ್‌ ಟಾಟಾ ಅಸ್ತಂಗತ; ಮೋದಿ ಸಂತಾಪ

ಭಾರತದ ಶ್ರೀಮಂತ ಉದ್ಯಮಿ ಮತ್ತು ಟಾಟಾ ಸನ್ಸ್‌ ಚೇರ್ಮನ್‌ ಆಗಿರುವ ರತನ್‌ ಟಾಟಾ ಅವರು ನಿಧನರಾಗಿದ್ದಾರೆ. ಆರೋಗ್ಯದಲ್ಲಿ ಏರುಪೇರಾಗಿ ಮುಂಬೈನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಪಲಿಸದೆ ನಿಧನರಾಗಿದ್ದಾರೆ.

86 ವರ್ಷದ ರತನ್‌ ಟಾಟಾ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಎಂದಿನಂತೆಯೇ ಜನರಲ್​ ಚೆಕಪ್​ಗಾಗಿ ಆಸ್ಪತ್ರೆಗೆ ಭೇಟಿ ನೀಡಿರುವುದಾಗಿ ತಾವೇ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಆದರೀಗ, ಆರೋಗ್ಯ ಸ್ಥಿತಿ ಗಂಭೀರವಾಗಿ ನಿಧನರಾಗಿದ್ದಾರೆ.

1991ರಲ್ಲಿ ಟಾಟಾ ಸನ್ಸ್‌ ಚೇರ್ಮನ್‌ ಆಗಿದ್ದ ರತನ್‌ ಟಾಟಾ 2012ರವರೆಗೂ ಈ ಹುದ್ದೆಯಲ್ಲಿದ್ದರು. ತಮ್ಮ ಮರಿ ಮುತ್ತಜ್ಜ ಸ್ಥಾಪನೆ ಮಾಡಿದ್ದ ಗ್ರೂಪ್‌ ಅನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿದ ಯಶಸ್ಸು ಇವರಿಗಿದೆ. ಟಾಟಾ ಸನ್ಸ್, ಟಾಟಾ ಇಂಡಸ್ಟ್ರೀಸ್, ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್ ಮತ್ತು ಟಾಟಾ ಕೆಮಿಕಲ್ಸ್‌ ಕೂಡ ಇದೆ. ಇವರ ಅಗಲುವಿಕೆಯ ಬಗ್ಗೆ ಮೋದಿ ಎಕ್ಸ್ ನಲ್ಲಿ ಸಂತಾಪ ಸೂಚಿಸಿದ್ದಾರೆ.

Related Articles

Latest Articles