Sunday, October 13, 2024

9 ವರ್ಷದ ಬಾಲಕನಿಗೆ ರಾಮಲಲ್ಲಾ ಮೇಕಪ್ ಮಾಡಿದ ಬೆಂಗಾಲಿ ಜೋಡಿ

ಜನವರಿ 22ರಂದು ರಾಮಮಂದಿರದ ಪ್ರತಿಷ್ಠಾಪನೆ ಸಮಾರಂಭ ನಡೆದಾಗಿನಿಂದ ಅಯೋಧ್ಯೆಯ ರಾಮಲಲ್ಲಾನನ್ನು ಕಣ್ತುಂಬಿಕೊಳ್ಳಲು ಕಾತರರಾಗಿರಬಹುದು. ಆದರೆ, ಈ ಮೇಕಪ್ ಕಲಾವಿದರು ಆ ರಾಮಲಲ್ಲಾನನ್ನು ತಮ್ಮ ಮೇಕಪ್ ಸಾಮರ್ಥ್ಯದಿಂದ ಸೃಷ್ಟಿಸಿ ಕೋಟ್ಯಾಂತರ ಮನಸ್ಸುಗಳನ್ನು ಗೆದ್ದಿದ್ದಾರೆ.

ಪಶ್ಚಿಮ ಬಂಗಾಳದ ಅಸನ್ಸೋಲ್‌ನ ಮೇಕಪ್ ಕಲಾವಿದರಾದ ಆಶಿಶ್ ಕುಂದು ಅವರ ಮೇಕಪ್ ಕಲಾತ್ಮಕತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಮೇಕಪ್ ಆರ್ಟಿಸ್ಟ್ ಕುಂದು ತಮ್ಮ ಪತ್ನಿ ರೂಬಿಯ ಸಹಾಯದಿಂದ 9 ವರ್ಷದ ಬಾಲಕನನ್ನು ಅಯೋಧ್ಯೆಯ ರಾಮಮಂದಿರದಲ್ಲಿ ಇರಿಸಲಾಗಿರುವ ರಾಮಲಲ್ಲಾನ ವಿಗ್ರಹವನ್ನು ಹೋಲುವಂತೆ ಪರಿವರ್ತಿಸಿದ್ದಾರೆ.

ಅಸನ್ಸೋಲ್‌ನ ಮೊಹಿಸೆಲಾ ಪ್ರದೇಶದ 9 ವರ್ಷದ ಬಾಲಕ ಅಬಿರ್ ದೆ ಎಂಬಾತನನ್ನು ಶ್ರೀ ರಾಮಲಲ್ಲಾನಂತೆ ಮೇಕಪ್‌ ಮಾಡಿದ್ದಾರೆ. ಮೇಕಪ್ ಬಳಿಕ ಬಾಲ ಥೇಟ್ ರಾಮನ ವಿಗ್ರಹದಂತೆಯೇ ಹೋಲುತ್ತಾನೆ.

ಈ ಬಾಲಕನನ್ನು ದಾರಿಯಲ್ಲಿ ನೋಡಿದಾಗ ಕುಂದು ಅವರಿಗೆ ರಾಮಲಲ್ಲಾ ಮೇಕಪ್‌ಗೆ ಈತನೇ ಬೆಸ್ಟ್ ಎನಿಸಿತಂತೆ. ಕೂಡಲೇ ಆತನ ಕುಟುಂಬ ಸಂಪರ್ಕಿಸಿ ತಮ್ಮ ಇಚ್ಚೆ ವ್ಯಕ್ತಪಡಿಸಿದಾಗ, ಅವರೂ ಸಂತೋಷದಿಂದ ಒಪ್ಪಿದ್ದಾರೆ.

ಹಗಲಿನಲ್ಲಿ ಬ್ಯೂಟಿ ಪಾರ್ಲರ್ ಅನ್ನು ನಿರ್ವಹಿಸುವ ಕಲಾವಿದ ದಂಪತಿಗಳು ಅಬೀರ್ ರಾಮಲಲ್ಲಾ ಆಗಿ ರೂಪಾಂತರಗೊಳ್ಳಲು ತಮ್ಮ ರಾತ್ರಿಗಳನ್ನು ಅರ್ಪಿಸಿದ್ದಾರೆ.

ಅವರು ಎಚ್ಚರಿಕೆಯಿಂದ ಮೇಕ್ಅಪ್ ವಸ್ತು ಗಳು ಮತ್ತು ಆಭರಣಗಳನ್ನು ರಚಿಸಿದರು, ಚಿತ್ರಣದ ಸಮಯದಲ್ಲಿ ಅಬೀರ್‌ಗೆ ಸಮಸ್ಯೆಯಾಗದಂತೆ ಹಗುರವಾದ ಫೋಮ್ ಅನ್ನು ಆರಿಸಿಕೊಂಡರು.

ಮೇಕ್ಅಪ್ ಪೂರ್ಣಗೊಂಡ ನಂತರ ಕುಂದು ಸಾರ್ವಜನಿಕರಿಗೆ ಅಬಿರ್ ಅನ್ನು ಅನಾವರಣಗೊಳಿಸುತ್ತಿದ್ದಂತೆ, ಗಮನಾರ್ಹವಾದ ರೂಪಾಂತರದಿಂದ ಪ್ರೇಕ್ಷಕರು ಮಂತ್ರಮುಗ್ಧರಾಗಿದ್ದಾರೆ. ಅಬೀರ್ ರಾಮ್ ಲಲ್ಲಾನ ವಿಗ್ರಹವಾಗಿ ಅಲಂಕರಿಸಿರುವ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವ್ಯಾಪಕ ಗಮನ ಸೆಳೆದಿವೆ.

Related Articles

Latest Articles