Monday, October 14, 2024

ಅಯೋಧ್ಯೆಗೆ ತೆರಳಿದ್ದ ಸೂಪರ್ ಸ್ಟಾರ್ ‌ಅನ್ನು ಟೀಕಿಸಿದ್ದ ಕಬಾಲಿ ನಿರ್ದೇಶಕನಿಗೆ ಸರಿಯಾಗೇ ತಿರುಗೇಟು ನೀಡಿದ ರಜನಿ

ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆಗೆ ತೆರಳಿದ್ದ ರಜನಿಕಾಂತ್ ವಿರುದ್ದ ಟೀಕೆ ಮಾಡಿದ್ದ ಕಬಾಲಿ ಸಿನೆಮಾ ನಿರ್ದೇಶಕ ಪಾ ರಂಜಿತ್ ಗೆ ಸೂಪರ್ ಸ್ಟಾರ್ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ ಬಳಿಕ ಅಯೋಧ್ಯೆ ಶ್ರೀರಾಮ ಮಂದಿರದ ಬಗ್ಗೆ ಸೂಪರ್‌ಸ್ಟಾರ್ ರಜನಿಕಾಂತ್ ಕೊಟ್ಟ ಹೇಳಿಕೆಗೆ ಕಬಾಲಿ ನಿರ್ದೇಶಕ ಪಾ ರಂಜಿತ್ ವಿರೋಧ ವ್ಯಕ್ತಪಡಿಸಿದ್ದಾರೆ.

“ರಾಮ ಮಂದಿರಕ್ಕೆ ಹೋಗುವುದು ಅವರ (ರಜನಿಕಾಂತ್) ಆಯ್ಕೆ. ಆದರೆ, 500 ವರ್ಷಗಳ ಸಮಸ್ಯೆಗೆ ಸಿಕ್ಕ ಪರಿಹಾರ ಎಂದು ರಜನಿಕಾಂತ್ ಹೇಳಿದ್ದಾರೆ. ನಾನು ಇದರ ಹಿಂದಿರುವ ರಾಜಕೀಯವನ್ನು ಪ್ರಶ್ನೆ ಮಾಡಬೇಕು. ಅವರು ಸರಿ ಅಥವಾ ತಪ್ಪು ಅನ್ನುವ ಅನ್ನುವ ಅವರ ಅಭಿಪ್ರಾಯವನ್ನು ನಾನು ಟೀಕಿಸುತ್ತೇನೆ.” ಎಂದು ಪಾ.ರಂಜಿತ್ ಹೇಳಿದ್ದರು.

ರಜನಿಕಾಂತ್ ವಿರುದ್ಧ ಪಾ.ರಂಜಿತ್ ಟೀಕಿಸಿದ್ದರ ಬಗ್ಗೆ ಚರ್ಚೆಯಾಗುತ್ತಿತ್ತು. ಈ ಬೆನ್ನಲ್ಲೇ ರಜನಿಕಾಂತ್ ಕೂಡ ಮುಖ್ಯ ಅತಿಥಿಯಾಗಿ ಶ್ರೀರಾಮ ಮಂದಿರ ಉದ್ಘಾಟನೆಗೆ ಅಯೋಧ್ಯೆಗೆ ತೆರಳಿದ್ದರು. ಅಲ್ಲಿಂದ ಹಿಂತಿರುಗುತ್ತಿದ್ದಂತೆ ರಜನಿಕಾಂತ್‌ಗೆ ರಾಮ ಮಂದಿರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ವೇಳೆ ಸೂಪರ್‌ಸ್ಟಾರ್ ರಜನಿಕಾಂತ್, “ನನಗೆ ತುಂಬಾ ಒಳ್ಳೆಯ ದರ್ಶನ ಸಿಕ್ಕಿದೆ. ರಾಮ ಮಂದಿರ ಓಪನ್ ಆಗುತ್ತಿದ್ದಂತೆ ದರ್ಶನ ಪಡೆದ ಮೊದಲ 150 ಮಂದಿಯಲ್ಲಿ ನಾನು ಒಬ್ಬ. ಇದು ನನಗೆ ತುಂಬಾನೇ ಸಂತೋಷ ಕೊಟ್ಟಿದೆ. ನನಗೆ ಇದು ಆಧ್ಯಾತ್ಮ.. ರಾಜಕೀಯ ಅಲ್ಲ. ಪ್ರತಿಯೊಬ್ಬರಲ್ಲೂ ವಿಭಿನ್ನ ಅಭಿಪ್ರಾಯವಿರುತ್ತೆ. ಇದು ಯಾವುದೇ ಸಮಯದಲ್ಲೂ ಹೊಂದಾಣಿಕೆಯಾಗುವುದಿಲ್ಲ.” ಎಂದು ರಜನಿಕಾಂತ್ ಪ್ರತಿಕ್ರಿಯೆ ನೀಡಿದ್ದರು

Related Articles

Latest Articles