Monday, October 14, 2024

ಸಿನಿಮಾ ರಂಗ ತೊರೆದು ಚರ್ಚ್ ಪಾಸ್ಟರ್ ಆದ ಸ್ಟಾರ್ ನಟ..! ಕೃಷ್ಣಮೂರ್ತಿ ಮತಾಂತರ ಆಗಿದ್ದೇಕೆ..?

ಹೈದರಾಬಾದ್: ಹತ್ತು ವರ್ಷದ ಸಿನಿಲೋಕದಲ್ಲಿ 30 ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕವಾಗಿ ಸ್ಟಾರ್ ನಟರಲ್ಲಿ ಒಬ್ಬರಾಗಿ ಮಿಂಚಿದ್ದ ತೆಲುಗು ನಟ ರಾಜಾ ಹೇಬೆಲ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

ರಾಜಾ ಹೇಬೆಲ್ ಅವರ ಮೂಲ ಹೆಸರು ಕೃಷ್ಣಮೂರ್ತಿ. ಒಬ್ಬ ಯುವ ನಾಯಕ ತನ್ನ ಸಿನಿಮಾ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಉದ್ಯಮವನ್ನು ತೊರೆದರು. ಮುಂದೆ ಇವರು ಆಯ್ಕೆ ಮಾಡಿಕೊಂಡಿರುವ ಹಾದಿ ಇದೀಗ ಸುದ್ದಿಯಾಗಿದೆ.

ರಾಜಾ ಹೇಬೆಲ್ ಅವರ ಮೂಲ ಹೆಸರು ಕೃಷ್ಣಮೂರ್ತಿ ಮೂಲತಃ ಬ್ರಾಹ್ಮಣ ಸಮುದಾಯದವರಾದ ಕೃಷ್ಣಮೂರ್ತಿ ಅವರ ತಾಯಿ ಚಿಕ್ಕವರಿದ್ದಾಗ ನಿಧನರಾದರು. ನಂತರ ಅವರ ತಂದೆ ದೂರವಾದ ನಂತರ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು. ನಂತರ ತಮ್ಮ ಹೆಸರನ್ನು ರಾಜಾ ಹೇಬೆಲ್ ಎಂದು ಬದಲಾಯಿಸಿಕೊಂಡರು.

ಎರಡು ದಶಕಗಳ ಹಿಂದೆ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಈ ಯುವ ನಟ ತಮ್ಮ ಸಹಜ ಅಭಿನಯದಿಂದ ಪ್ರೇಕ್ಷಕರ ಮನಗೆದ್ದಿದ್ದರು. ನೋಡಲು ಕೂಲ್ ಆಗಿರುವ ಇವರು ಫ್ಯಾಮಿಲಿ ಆಡಿಯನ್ಸ್ ಹಾಗೂ ಯುವಜನತೆಯಲ್ಲಿ ಒಳ್ಳೆಯ ಹೀರೋ ಎಂದೇ ಖ್ಯಾತಿ ಗಳಿಸಿದ್ದಾರೆ. ಮಹೇಶ್ ಬಾಬು ಅಭಿನಯದ ಅರ್ಜುನ್ ಸಿನಿಮಾದಲ್ಲೂ ರಾಜಾ ನಟಿಸಿದ್ದರು. ಆದರೆ ರಾಜಾ ಹೇಬಲ್ ನಟನಾಗಿ ಗುರುತಿಸಿಕೊಂಡ ಕೆಲ ಕಾಲದಲ್ಲಿ ನಟನೆಗೆ ವಿದಾಯ ಹೇಳಿದರು.

ಚಿತ್ರರಂಗದಿಂದ ಹೊರಬಂದ ನಂತರ ರಾಜಾ ಚರ್ಚ್‌ನಲ್ಲಿ ಪಾಸ್ಟರ್ ಆಗಿದ್ದಾರೆ. ಪ್ರಸ್ತುತ, ಸ್ಟಾರ್ ಹೀರೋ ಮುಶಿರಾಬಾದ್‌ನ ದಿ ನ್ಯೂ ಕವೆನೆಂಟ್ ಚರ್ಚ್‌ನಲ್ಲಿ ಭಕ್ತರಿಗೆ ದೈವಿಕ ಭವಿಷ್ಯವಾಣಿಯನ್ನು ನೀಡುತ್ತಿದ್ದಾರೆ. ವೈಎಸ್‌ಆರ್ ನಿಧನದ ನಂತರ ರಾಜಕೀಯದಿಂದ ದೂರ ಉಳಿದು ಆಧ್ಯಾತ್ಮಿಕ ಮಾರ್ಗವನ್ನೇ ಅನುಸರಿಸಿದ್ದಾರೆ.

ರಾಜಾ 2014ರ ಚುನಾವಣೆಯಲ್ಲಿ ವೈಸಿಪಿಯನ್ನು ಬೆಂಬಲಿಸಿದ್ದರು. ರಾಜಕೀಯ, ಚಿತ್ರರಂಗವನ್ನು ತೊರೆದು ಪಾಸ್ಟರ್ ಆಗುವುದಕ್ಕೆ ದೇವರ ಕೃಪೆಯೇ ಕಾರಣ ಎನ್ನುತ್ತಾರೆ ಈ ಮಾಜಿ ಸ್ಟಾರ್ ಹೀರೋ. ಆದರೆ ಬಲವಂತದ ಮತಾಂತರ ಮತ್ತು ಈ ದೇವರನ್ನು ನಂಬುವಂತೆ ಒತ್ತಾಯಿಸುವುದು ಸರಿಯಾದ ವಿಧಾನವಲ್ಲ. ಆಧ್ಯಾತ್ಮಿಕ ಜೀವನ ನಡೆಸುವುದು ಮತ್ತು ಇರುವುದರಲ್ಲೇ ತೃಪ್ತರಾಗಿರುವುದು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ನಿಮ್ಮ ಇಷ್ಟದ ದೇವರನ್ನು ನೀವು ಇಷ್ಟಪಡುವ ರೀತಿಯಲ್ಲಿ ಪೂಜಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ರಾಜಾ ಹೇಳುತ್ತಾರೆ.

Related Articles

Latest Articles