Monday, December 9, 2024

ದರ್ಶನ್ ಹೊಸ ಸಿನಿಮಾಕ್ಕೆ ಸಿಕ್ಕರು ನಾಯಕಿ..! ತುಳುನಾಡಿನ ಚೆಲುವೆ ಯಾರು ಗೊತ್ತಾ??

ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಡಿಸೆಂಬರ್ ಅಂತ್ಯದಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿತ್ತು‌ ಪ್ಯಾನ್ ಇಂಡಿಯಾ ಅಲ್ಲದೆ ಕೇವಲ ಕನ್ನಡದಲ್ಲಿ ಮಾತ್ರವೇ ಬಿಡುಗಡೆ ಆದ ಸಿನಿಮಾ ಕರ್ನಾಟಕದ ಬಾಕ್ಸ್ ಆಫೀಸ್​ನಲ್ಲಿ ದಾಖಲೆಗಳನ್ನು ಬರೆದಿದೆ. ‘ಕಾಟೇರ’ ಸಿನಿಮಾ ಬಿಡುಗಡೆಗೆ ಮುನ್ನವೇ ದರ್ಶನ್​ರ ಹೊಸ ಸಿನಿಮಾದ ಘೋಷಣೆ ಆಗಿತ್ತು. ಪ್ರತಿಭಾವಂತ ನಿರ್ದೇಶಕ ಮಿಲನಾ ಪ್ರಕಾಶ್ ನಿರ್ದೇಶನ ಮಾಡಲಿರುವ ‘ಡೆವಿಲ್: ದಿ ಹೀರೋ’ ಸಿನಿಮಾದಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ನಾಯಕಿಯ ಆಯ್ಕೆ ಆಗಿದೆ.

ತುಳು ಭಾಷೆಯ ‘ಸರ್ಕಸ್’ ಸಿನಿಮಾದಲ್ಲಿ ನಟಿಸಿರುವ, ಮಾಡೆಲ್ ಸಹ ಆಗಿರುವ ರಚನಾ ರೈ ಅವರು ದರ್ಶನ್​ರ ‘ಡೆವಿಲ್’ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ರಚನಾ ‘ಡೆವಿಲ್’ ಸಿನಿಮಾಕ್ಕೆ ಆಯ್ಕೆ ಆಗುತ್ತಿದ್ದಂತೆ ಅವರ ಇನ್​ಸ್ಟಾಗ್ರಾಂ ಹಾಗೂ ಟ್ವಿಟ್ಟರ್ ಖಾತೆ ಫಾಲೋವರ್​ಗಳ ಸಂಖ್ಯೆ ಭಾರಿ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಯಾರು ಈ ರಚನಾ ಎಂದು ಅಭಿಮಾನಿಗಳು ಹುಡುಕಾಟ ನಡೆಸಲು ಆರಂಭಿಸಿದ್ದಾರೆ.

ರಚನಾ ರೈ ಹುಟ್ಟಿದ್ದು ಪುತ್ತೂರಿನಲ್ಲಿ, ಮಾಡೆಲಿಂಗ್ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದಾರೆ. ‘ಸರ್ಕಸ್’ ಹೆಸರಿನ ಸೂಪರ್ ಹಿಟ್ ತುಳು ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಸ್ತುತ ಧನ್ವೀರ್ ಗೌಡ ನಟನೆಯ ‘ವಾಮನ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ಕೋಸ್ಟಲ್‌ವುಡ್‌ನಿಂದ ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ. ಇದೀಗ ‘ಡೆವಿಲ್’ ದರ್ಶನ್ ಜೋಡಿಯಾಗಿ ನಟಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಚನಾ ರೈಗೆ ಭಾರಿ ಸಂಖ್ಯೆಯ ಫಾಲೋವರ್​ಗಳು ಹುಟ್ಟಿಕೊಂಡಿದ್ದಾರೆ. ಟ್ವಿಟ್ಟರ್​ನಲ್ಲಿ ರಚಿತಾ ಫಾಲೋ ಮಾಡುತ್ತಿರುವುದು ದರ್ಶನ್ ಒಬ್ಬರನ್ನೇ‌ ಅನ್ನುವುದು ವಿಶೇಷ.

Related Articles

Latest Articles