Tuesday, January 21, 2025

ಪುತ್ತೂರು: ನಾಪತ್ತೆಯಾಗಿದ್ದ ಯುವಕ‌ನ ಶವ ಪತ್ತೆ

ಪುತ್ತೂರು: ಸರ್ವೆ ಗೌರಿ ಹೊಳೆಯ ಸೇತುವೆ ಸಮೀಪ ದ್ವಿಚಕ್ರ ವಾಹನ ನಿಲ್ಲಿಸಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಗೌರಿ ಹೊಳೆಯಲ್ಲಿ ಜು. 21 ರಂದಯ ಪತ್ತೆಯಾಗಿದೆ.

ಕುದ್ಮಾರು ಗ್ರಾಮದ ತೆಕ್ಕಿತ್ತಡಿ ನಿವಾಸಿ, ಪುತ್ತೂರಿನ ಖಾಸಗಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸನ್ಮಿತ್ (21) ಮೃತ ಯುವಕ.

ಸನ್ಮಿತ್ ಜು.19 ರಂದು ರಾತ್ರಿ ವೇಳೆ ಕೆಲಸ ಮುಗಿಸಿ ಬರುವಾಗ ಸರ್ವೆ ಗೌರಿ ಹೊಳೆಯ ಪಕ್ಕ ವಾಹನ ನಿಲ್ಲಿಸಿ, ಮೊಬೈಲ್, ಪರ್ಸ್ ಗಳನ್ನು ಅಲ್ಲಿಯೇ ಬಿಟ್ಟು ನಾಪತ್ತೆಯಾಗಿದ್ದು, ಗೌರಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು.

ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಸ್ಥಳೀಯರು ಕಾರ್ಯಚರಣೆ ನಡೆಸಿದ ವೇಳೆ ಇಂದು ಯುವಕನ ಮೃತದೇಹ ಪತ್ತೆಯಾಗಿದೆ.

Related Articles

Latest Articles