ಪುತ್ತೂರು: ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಪುರುಷರಕಟ್ಟೆ ನಿವಾಸಿ ಪ್ರಕಾಶ್ (45) ಮೃತರು.
ಪ್ರಕಾಶ್ ಅವರು ನರಿಮೊಗರು ವಲಯ ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದು ಯಂಗ್ ಬ್ರಿಗೇಡ್ ನಲ್ಲಿ ಕೂಡ ತೊಡಗಿಸಿಕೊಂಡಿದ್ದರು. ಕ್ರಿಕೆಟ್ ಆಟಗಾರರಾಗಿದ್ದ ಪ್ರಕಾಶ್ ಪುತ್ತೂರು KSRTC ಬಸ್ ನಿಲ್ದಾಣದ ಬಳಿ ಮೊಬೈಲ್ ಶಾಪ್ ಅನ್ನು ಹೊಂದಿದ್ದರು.
ಮೃತರು ಪತ್ನಿ, ಮಗಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಮೃತದೇಹವನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿರಿಸಲಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಭೇಟಿ ನೀಡಿದ್ದಾರೆ.