Monday, December 9, 2024

ಉಳ್ಳಾಲ ಮಾದರಿಯಲ್ಲೇ ಮತ್ತೊಂದು ದುರುಂತ..! ಪುತ್ತೂರಿನಲ್ಲಿ ಧರೆ ಕುಸಿತ – ಮಣ್ಣಿನಡಿಯಲ್ಲಿ ಸಿಲುಕಿದ ಮಕ್ಕಳ ರಕ್ಷಣೆ

ಪುತ್ತೂರು: ಕರಾವಳಿಯಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ವಿವಿಧ ಅನಾಹುತಗಳು ಸಂಭವಿಸುತ್ತಿದೆ. ನಿನ್ನೆಯಷ್ಟೆ (ಜೂ.26) ಉಳ್ಳಾಲದಲ್ಲಿ ಕಂಪೌಂಡ್ ಗೋಡೆ ಕುಸಿದು ಒಂದೇ ಕುಟುಂಬದ ನಾಲ್ವರು ಅಸುನೀಗಿದ್ದರು. ಈಗ ಅಂತಹದ್ದೇ ಮತ್ತೊಂದು ಘಟನೆ ನಡೆದಿದ್ದು ಅದೃಷ್ಟವಶಾತ್ ಅಪಾಯದಿಂದ ಪರಾಗಿದ್ದಾರೆ.

ಮಳೆಯಿಂದ ಅನೇಕ ಕಡೆ ಧರೆಕುಸಿದ ಘಟನೆ ನಡೆಯುತ್ತಿದ್ದು ಪುತ್ತೂರು ಬನ್ನೂರಿನ ಜೈನರಗುರಿ ಸಮೀಪ ಮಜೀದ್ ಎಂಬರ ಮನೆ ಮೇಲೆ ಧರೆ ಕುಸಿದ ಘಟನೆ ನಡೆದಿದೆ. ಪರಿಣಾಮ ಮನೆ ಹಾನಿಗೊಂಡ ಮತ್ತು ನಿದ್ದೆಯಲ್ಲಿದ್ದ ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿದ ಘಟನೆ ಜೂ.27 ರ ನಸುಕಿನ ಜಾವ ನಡೆದಿದೆ.

ಬನ್ನೂರು ಜೈನರಗುರಿ ಮಜೀದ್ ಎಂಬವರ ಮನೆಯ ಪಕ್ಕದ ಧರೆಯೊಂದರ ಮಣ್ಣು ಮಳೆಗೆ ಸಡಿಲಗೊಂಡು ಮನೆಮೇಲೆ ಕುಸಿದು ಬಿದ್ದಿದೆ. ಮಜೀದ್ ಮತ್ತು ಮನೆ ಮಂದಿ ಮಕ್ಕಳು ಮಲಗಿದ್ದ ಕೊಠಡಿಯ ಮೇಲೆ ಮಣ್ಣು ಕುಸಿದ ಪರಿಣಾಮ ಮನೆಯ ಅರ್ಧ ಭಾಗ ಕುಸಿದಿತ್ತು.

ಈ ವೇಳೆ ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿದ್ದರು. ತಕ್ಷಣ ಮನೆಯಲ್ಲಿದ್ದ ಉಳಿದವರು ಮಕ್ಕಳನ್ನು ಮಣ್ಣಿನಡಿಯಿಂದ ಹೊರ ಎಳೆದು ಅಪಾಯವನ್ನು ತಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ನಗರಸಭಾ ಸದಸ್ಯ ಪಿ ಜಿ ಜಗನ್ನಿವಾಸ ರಾವ್, ಪೌರಾಯುಕ್ತ ಮಧು ಎಸ್ ಮನೋಹರ್ ಸಹಿತ ನಗರಸಭೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ನಗರಸಭೆ ಮತ್ತು ಸ್ಥಳೀಯರು ಮಣ್ಣು ತೆರವು ಕಾರ್ಯ ಮಾಡಿದ್ದಾರೆ.

Related Articles

Latest Articles