ಬಸ್ಸಿನಡಿಗೆ ಬಿದ್ದು ಪ್ರಯಾಣಿಕರೊಬ್ಬರು ಮೃತಪಟ್ಟ ದಾರುಣ ಘಟನೆ ಕರ್ನಾಟಕ-ಕೇರಳ ಗಡಿಪ್ರದೇಶವಾದ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಗಾಳಿಮುಖದಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.
ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ನಿವಾಸಿ ಕುಂಞರಾಮ ಮಣಿಯಾಣಿ (68) ಮೃತಪಟ್ಟವರು.
ಕೇರಳದ ಅಡೂರಿನಿಂದ ಮುಳ್ಳೇರಿಯಾ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದರಲ್ಲಿ ಬಂದು ಗಾಳಿಮುಖದಲ್ಲಿ ಇಳಿದ ಕುಂಞರಾಮ ಅವರು, ಬಸ್ಸಿನಿಂದ ಇಳಿದು ಬಸ್ಸಿನ ಎದುರು ಭಾಗದ ಮೂಲಕವಾಗಿ ರಸ್ತೆ ದಾಟುತ್ತಿದ್ದ ವೇಳೆ ಅವರನ್ನು ಗಮನಿಸದೆ ಚಾಲಕ ಬಸ್ಸು ಚಾಲಾಯಿಸಿದ್ದು, ಅವರ ಎದೆ ಭಾಗದ ಮೇಲೆಯೇ ಬಸ್ಸಿನ ಚಕ್ರವೊಂದು ಹರಿದು ಹೋಗಿದೆ. ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.