Wednesday, July 24, 2024

‘ಪ್ರದೀಪ್ ಈಶ್ವರ್ ರಾಜೀನಾಮೆ ಕೊಡ್ತಾರೆ’ ಪ್ರತಾಪ್ ಸಿಂಹ ಖಡಕ್ ಚಾಲೆಂಜ್‌!

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ವಿರುದ್ಧ ಸ್ಪರ್ಧಿಸಿರುವ ಸುಧಾಕರ್ ಅವರು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ವಿಜಯಶಾಲಿಯಾಗಿದ್ದಾರೆ. ಈ ನಡುವೆ ಪ್ರದೀಶ್ ರಾಜೀನಾಮೆ ನೀಡುತ್ತಾರೆ ಅನ್ನುವ ಸುದ್ದಿ ವೈರಲ್ ಆಗಿದೆ. ಈ ಬಗ್ಗೆ ಪ್ರತಾಪ್ ಸಿಂಹ ಮಾತನಾಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಅವರ ಗೆಲುವಿನ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಪ್ರತಾಪ್ ಸಿಂಹ ಅವರು ಕಾಂಗ್ರೆಸ್ ನಾಯಕರ ಕಾಲು ಎಳೆದಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಅವರ ಗೆಲುವಿನ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಅವರು ಸೋಷಿಯಲ್ ಮೀಡಿಯಾ Xನಲ್ಲಿ ಪೋಸ್ಟ್ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಅವರು ಸುಧಾಕರ್ ಅವರಿಗೆ ಹಾಕಿದ್ದ ಸವಾಲಿನ ಹಳೇ ವಿಡಿಯೋವನ್ನು ಪೋಸ್ಟ್ ಮಾಡಿರುವ ಪ್ರತಾಪ್ ಸಿಂಹ್ ಅವರು ಕೆಲವೇ ಗಂಟೆಗಳಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಒಂದು ವೋಟ್ ಸುಧಾಕರ್‌ ಹೆಚ್ಚು ತೆಗೆದುಕೊಂಡ್ರೆ ನಾನು ರಾಜೀನಾಮೆ ಕೊಡ್ತೀನಿ. ಚಿಕ್ಕಬಳ್ಳಾಪುರದಲ್ಲಿ 3 ಸಲ ಎಂಎಲ್‌ಎ ಆಗಿದ್ದರು. ಒಂದೇ ಒಂದು ವೋಟ್ ತೆಗೆದುಕೊಳ್ಳಲಿ ನಾನು ರಾಜೀನಾಮೆ ಪತ್ರ ತೆಗೆದುಕೊಂಡು ಬರ್ತೀನಿ.

ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ 100 ಪರ್ಸೆಂಟ್ ವಿನ್. ನಾನು ಇಲ್ಲೇ ಕುಳಿತುಕೊಂಡು ಚಾಲೆಂಜ್ ಮಾಡಿದ್ದೀನಿ. ಆ ಚಾಲೆಂಜ್ ಪರವಾಗಿ ನಿಲ್ಲುತ್ತೇನೆ. ಈ ಜನರೇಷನ್ ರಾಜಕಾರಣ ನಾವು ಸ್ಮಾರ್ಟ್‌ ಆಗಿ ಇದ್ದು ಆಗುತ್ತೆ ಅಂತಲ್ಲ. ನಾವು ಗೆಲ್ಲುತ್ತೇವೆ ಅಂತ ಹೇಳಿದ್ದೇವೆ ಗೆಲ್ಲುತ್ತೇವೆ.

ನನ್ನ ಡೈಲಾಗ್ ಕರೆಕ್ಟಾಗಿ ರಿಪೀಟ್ ಮಾಡಿ ಜೂಮ್ ಹಾಕಿಕೊಂಡು ಕೇಳಿ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಒಂದು ವೋಟ್ ಸುಧಾಕರ್‌ ಹೆಚ್ಚು ತೆಗೆದುಕೊಂಡ್ರೆ ನಾನು ರಾಜೀನಾಮೆ ಕೊಡ್ತೀನಿ. ಚಿಕ್ಕಬಳ್ಳಾಪುರದಲ್ಲಿ 3 ಸಲ ಎಂಎಲ್‌ಎ ಆಗಿದ್ದರು. ಒಂದೇ ಒಂದು ವೋಟ್ ತೆಗೆದುಕೊಳ್ಳಲಿ ನಾನು ರಾಜೀನಾಮೆ ಪತ್ರ ತೆಗೆದುಕೊಂಡು ಬರ್ತೀನಿ ಎಂದಿದ್ದಾರೆ.‌ ಇದನ್ನೇ ಇಟ್ಟುಕೊಂಡು ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.

Related Articles

Latest Articles