ಕಾಸರಗೋಡು: ವ್ಯಾಪಾರಿಯೊಬ್ಬರು ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ. ಬದಿಯಡ್ಕ ಬಳಿಯ ಕಾಡಮನೆ ನಿವಾಸಿ ಸಾದಿಕ್ (35) ಮೃತಪಟ್ಟ ವ್ಯಕ್ತಿ. ಇವರು ಪೆರ್ಲ ಪಟೆಯಲ್ಲಿ ರೆಡಿಮೇಡ್ ಬಟ್ಟೆ ಅಂಗಡಿ ನಡೆಸುತ್ತಿದ್ದರು.

ಮೇ. 3ರ ರಾತ್ರಿ 9:30ರ ವೇಳೆ ಅಂಗಡಿ ಮುಚ್ಚಿ ಮನೆಗೆ ತೆರಳಿದ್ದರು. 10.30ರ ವೇಳೆ ಅವರು ಹೃದಯಾಘಾತವುಂಟಾಗಿ ಕುಸಿದು ಬಿದ್ದಿದ್ದರು. ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಂತೆ ದಾರಿ ಮಧ್ಯೆ ನಿಧನ ಸಂಭವಿಸಿದೆ.
ಅಬ್ದುಲ್ ರಹಿಮಾನ್- ಉಮ್ಮಾಲಿಮ್ಮ ದಂಪತಿಯ ಪುತ್ರನಾದ ಮೃತರು ಪತ್ನಿ ತಾಹಿರ, ಮಕ್ಕಳಾದ ಫಾತಿಮತ್ ಸಾರ, ಸಲಫಿ, ಸಹೋದರ- ಸಹೋದರಿಯರಾದ ಇಟ್ಬಾಲ್, ಕರೀಂ, ತಾಹಿರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.