Sunday, October 13, 2024

ಚಂದಕ್ಕಿಂತ ಚಂದ‌ ನೀನೇ ಸುಂದರ ಹಾಡು ಹಾಡಿದ್ದ ಗಾಯಕ ನಿಧನ

ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್​ ಖ್ಯಾತ ಗಜಲ್ ಗಾಯಕ ಪಂಕಜ್ ಉದಾಸ್ ನಿಧನರಾಗಿದ್ದಾರೆ. 72ನೇ ವಯಸ್ಸಿನಲ್ಲಿ ಪಂಕಜ್ ಉದಾಸ್ ಕೊನೆಯುಸಿರೆಳೆದಿದ್ದಾರೆ. ಗಜಲ್ ಹಾಡುಗಳಿಂದ ಗಾಯಕ ಪಂಕಜ್ ಉದಾಸ್ ಫೇಮಸ್ ಆಗಿದ್ದರು.

90ರ ದಶಕದಲ್ಲಿ ಕನ್ನಡ, ಗಜಲ್ ಮತ್ತು ಹಿಂದಿ ಸಿನಿಮಾಗಳ ಹಾಡಿನಿಂದ ಭಾರಿ ಜನಪ್ರಿಯರಾಗಿದ್ದರು. ಛಿಟ್ಟಿ ಆಯಿಹೈ , ಸಾಜನ್ ಸಿನಿಮಾದ ಹಾಡುಗಳನ್ನು ಹಾಡಿದ್ದಾರೆ. 2006ರಲ್ಲಿ ಪಂಕಜ್ ಗಾಯನ ಸೇವೆಗೆ ಪದ್ಮಶ್ರೀ ಪ್ರಶಸ್ತಿ ಕೂಡ ಬಂದಿತ್ತು. ಕಿಚ್ಚ ಸುದೀಪ್ ನಟನೆಯ ಸ್ಪರ್ಶ ಸಿನಿಮಾದ ಬರೆಯದ ಮೌನದ ಕವಿತೆ ಹಾಗೂ ಚಂದಕ್ಕಿಂತ ಚಂದ ನೀನೇ ಸುಂದರ ಹಾಡನ್ನು ಪಂಕಜ್ ಉದಾಸ್​ ಅವರು ಹಾಡಿದ್ದರು. ನಾದಬ್ರಹ್ಮ ಹಂಸಲೇಖ ಅವರು ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಕಳೆದ 10 ದಿನದ ಹಿಂದೆ ಗಾಯಕ ಪಂಕಜ್ ಉದಾಸ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಬೆಳಗ್ಗೆ 11 ಗಂಟೆಗೆ ಗಾಯಕ ಪಂಕಜ್ ಉದಾಸ್ ಇಹಲೋಕ ತ್ಯಜಿಸಿದ್ದಾರೆ. ಇನ್ನು ಗಾಯಕ ಪಂಕಜ್ ಉದಾಸ್ ನಿಧನ ಸುದ್ದಿಯನ್ನು ಅವರ ಕುಟುಂಬದವರು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಗಜಲ್ ಗಾಯಕ ಪಂಕಜ್ ಉದಾಸ್ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Related Articles

Latest Articles