Wednesday, July 24, 2024

ರಾಮ ಮಂದಿರ: ಪ್ರಾಣ ಪ್ರತಿಷ್ಠಾ ಸಮಾರಂಭದಿಂದ ರೂ. 1 ಲಕ್ಷ ಕೋಟಿ ವ್ಯವಹಾರದ ನಿರೀಕ್ಷೆ!

ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭದೊಂದಿಗೆ 1 ಲಕ್ಷ ಕೋಟಿ ರೂಪಾಯಿ ಮೊತ್ತದ ವ್ಯವಹಾರವನ್ನು ನಿರೀಕ್ಷಿಸಲಾಗಿದೆ ಎಂದು ವ್ಯಾಪಾರಿಗಳ ಸಂಸ್ಥೆ CAIT ಸೋಮವಾರ ತಿಳಿಸಿದೆ. ಅಯೋಧ್ಯೆ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭದೊಂದಿಗೆ 1 ಲಕ್ಷ ಕೋಟಿ ರೂಪಾಯಿ ಮೊತ್ತದ ವ್ಯವಹಾರವನ್ನು ನಿರೀಕ್ಷಿಸಲಾಗಿದೆ ಎಂದು ವ್ಯಾಪಾರಿಗಳ ಸಂಸ್ಥೆ CAIT ಸೋಮವಾರ ತಿಳಿಸಿದೆ.

ವಿವಿಧ ರಾಜ್ಯಗಳ 30 ನಗರಗಳಾದ್ಯಂತ ವ್ಯಾಪಾರ ಸಂಘಗಳಿಂದ ಪಡೆದ ಪ್ರತಿಕ್ರಿಯೆಯನ್ನು ಆಧರಿಸಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (CAIT) ಇಷ್ಟು ಪ್ರಮಾಣದ ವ್ಯವಹಾರವನ್ನು ಅಂದಾಜಿಸಿದೆ. “ಈ ಕಾರ್ಯಕ್ರಮವು ಧಾರ್ಮಿಕ ಭಾವನೆಗಳೊಂದಿಗೆ ಪ್ರತಿಧ್ವನಿಸುವುದಲ್ಲದೆ ಆರ್ಥಿಕ ಚಟುವಟಿಕೆಗಳಲ್ಲಿ ವೃದ್ಧಿಗೆ ಕಾರಣವಾಗಲಿದೆ. ದೇವರ ಮೇಲಿನ ಜನರ ನಂಬಿಕೆಯು ದೇಶದ ಸಾಂಪ್ರದಾಯಿಕ ಆರ್ಥಿಕ ವ್ಯವಸ್ಥೆಯ ಆಧಾರದ ಮೇಲೆ ಅನೇಕ ಹೊಸ ವ್ಯವಹಾರಗಳ ಸೃಷ್ಟಿಗೆ ಕಾರಣವಾಗುತ್ತಿದೆ ಎಂದು CAIT ಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ತಿಳಿಸಿದ್ದಾರೆ.

ರಾಮ ಮಂದಿರ ಉದ್ಘಾಟನೆ ಅಂಗವಾಗಿ ದೇಶಾದ್ಯಂತ ಸುಮಾರು 30,000 ವಿವಿಧ ವರ್ತಕ ಸಂಘಗಳಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಶ್ರೀರಾಮ ಧ್ವಜಗಳು, ಬ್ಯಾನರ್ಗಳು, ಕ್ಯಾಪ್ಗಳು, ಟೀ ಶರ್ಟ್ಗಳು ಮತ್ತು ರಾಮ ಮಂದಿರದ ಚಿತ್ರವನ್ನು ಒಳಗೊಂಡ ಮುದ್ರಿತ ‘ಕುರ್ತಾ’ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. “ರಾಮ ಮಂದಿರ ಮಾದರಿಗಳ ಬೇಡಿಕೆಯು ತ್ವರಿತ ರೀತಿಯಲ್ಲಿ ಹೆಚ್ಚಾಗಿದೆ ಮತ್ತು ದೇಶಾದ್ಯಂತ 5 ಕೋಟಿಗೂ ಹೆಚ್ಚು ಮಾದರಿಗಳು ಮಾರಾಟವಾಗುವ ನಿರೀಕ್ಷೆಯಿದೆ, ಇದಕ್ಕಾಗಿ ಸಣ್ಣ ಉತ್ಪಾದನಾ ಘಟಕಗಳು ವಿವಿಧ ರಾಜ್ಯಗಳ ಅನೇಕ ನಗರಗಳಲ್ಲಿ ಹಗಲು-ರಾತ್ರಿ ಕೆಲಸ ಮಾಡುತ್ತಿವೆ. ಮುಂದಿನ ವಾರದಲ್ಲಿ ದೆಹಲಿಯ 200 ಕ್ಕೂ ಹೆಚ್ಚು ಪ್ರಮುಖ ಮಾರುಕಟ್ಟೆಗಳು ಮತ್ತು ಹೆಚ್ಚಿನ ಸಂಖ್ಯೆಯ ಸಣ್ಣ ಮಾರುಕಟ್ಟೆಗಳು ಶ್ರೀರಾಮ ಧ್ವಜಗಳು ಮತ್ತು ಅಲಂಕಾರಗಳಿಗೆ ಸಾಕ್ಷಿಯಾಗಲಿವೆ ಎಂದು ಅವರು ಮಾಹಿತಿ ತಿಳಿಸಿದರು.

Related Articles

Latest Articles