ಭಾರತದಲ್ಲಿ ಚಾಲಕ ರಹಿತ ಕಾರುಗಳ ಬಳಕೆಗೆ ಅನುಮತಿ ಕೊಡಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಚಾಲಕ ರಹಿತ ಕಾರುಗಳು ಉದ್ಯೋಗಗಳನ್ನ ರೀಪ್ಲೇಸ್ ಮಾಡುತ್ತವೆ. ಹಾಗೆ ಆಗಲು ನಾವು ಬಿಡಲ್ಲ. ಇನ್ನು ಟೆಸ್ಲಾ ಕಾರುಗಳ ಬಗ್ಗೆ ಮಾತಾಡಿರುವ ಸಚಿವರು, ʻಟೆಸ್ಲಾ ಬೇಕಾದರೆ ಭಾರತದಲ್ಲಿ ಕಾರುಗಳನ್ನ ಉತ್ಪಾದನೆ ಮಾಡಲಿ. ಚೀನಾದಲ್ಲಿ ತಯಾರಾಗಿರುವ ಕಾರುಗಳನ್ನ ಇಂಪೋರ್ಟ್ ಮಾಡೋಕೆ ನಾವು ಒಪ್ಪಲ್ಲʼ ಅಂದಿದ್ದಾರೆ.
ಇದೇ ವೇಳೆ ಭಾರತ ಕ್ಲೀನ್ ಎನರ್ಜಿ ವಾಹನಗಳು ಅಂದರೆ EVಗಳು, ಸೇಫ್ ಹಾಗೂ ಅತ್ಯಾಧುನಿಕ ಟೆಕ್ನಾಲಜಿ ಹೊಂದಿದ ವಾಹನಗಳ ಕಡೆಗೆ ಮುಖ ಮಾಡಿದೆ. ಪ್ರಯಾಣಿಕರ ಸೇಫ್ಟಿಗಾಗಿ ಹಲವಾರು ಕ್ರಮ ತೆಗೆದುಕೊಳ್ತಿದ್ದೇವೆ. ರಸ್ತೆ ಸಾರಿಗೆ ಸಚಿವಾಲಯದ ಅಡಿಯಲ್ಲಿ ಭಾರತ್ NCAP ಕ್ರ್ಯಾಶ್ ಟೆಸ್ಟ್ ಮೂಲಕ ಹೊಸ ಕಾರುಗಳಿಗೆ ಸೇಫ್ಟಿ ರೇಟಿಂಗ್ ಕೊಡಲಾಗ್ತಿದೆʼ ಅಂದಿದ್ದಾರೆ.
ಇದೇ ವೇಳೆ ದೇಶದ ಗ್ರಾಹಕರು SUV ಅಂದ್ರೆ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್‌ಗಳ ಕಡೆ ಆಸಕ್ತರಾಗಿದ್ದಾರೆ ಅಂತ ಗಡ್ಕರಿ ಹೇಳಿದ್ದಾರೆ.