ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಇಂದು ಎರಡನೇ ಚಿನ್ನದ ಪದಕ ಲಭಿಸಿದೆ. ಕ್ರೀಡಾಕೂಟದ ಆರನೇ ದಿನ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್ಎಲ್3 ವಿಭಾಗದಲ್ಲಿ ನಿತೇಶ್ ಕುಮಾರ್ ಸ್ವಣ್ ಪದಕಕ್ಕೆ ಮುತ್ತಿಕ್ಕಿದ್ದಾರೆ. ಪಂದ್ಯಾಟದ ಕೊನೆಯವರೆಗೂ ಬಲು ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ನಿತೇಶ್ 21-14, 18-21, 23-21 ರಿಂದ ಗೆಲುವು ಸಾಧಿಸಿ ಚಿನ್ನದ ಹುಡುಗ ಆಗಿ ಹೊರಹೊಮ್ಮಿದರು.
ನಿತೇಶ್ ಕುಮಾರ್ ಸ್ವರ್ಣ ಭೇಟೆಯೊಂದಿಗೆ ಭಾರತ ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಇದುವರೆಗೆ ಒಟ್ಟು 9 ಪದಕಗಳನ್ನು ತನ್ನದಾಗಿಸಿಕೊಂಡಂತ್ತಾಗಿದೆ. ಪ್ಯಾರಾ-ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ SL3 ಈವೆಂಟ್‌ನ ಫೈನಲ್‌ನಲ್ಲಿ ನಿತೇಶ್ ಕುಮಾರ್ ಅವರು ಗ್ರೇಟ್ ಬ್ರಿಟನ್‌ನ ಡೇನಿಯಲ್ ಬೆಥೆಲ್ ಅವರನ್ನು ಎದುರಿಸಿದ್ದರು.
ನಿತೀಶ್ ಕುಮಾರ್ ಮತ್ತು ಗ್ರೇಟ್ ಬ್ರಿಟನ್‌ನ ಡೇನಿಯಲ್ ಬೆಥೆಲ್ ನಡುವೆ ಚಿನ್ನದ ಪದಕದ ಪಂದ್ಯದಲ್ಲಿ ಕಠಿಣ ಪೈಪೋಟಿ ಏರ್ಪಟ್ಟಿತ್ತು. ಪಂದ್ಯದ ಮೊದಲ ಸೆಟ್ ನಿತೇಶ್ ಕುಮಾರ್ ಹೆಸರಿನಲ್ಲಿತ್ತು. ಈ ಸೆಟ್ ಅನ್ನು ನಿತೇಶ್ 21-14 ರಿಂದ ಗೆದ್ದುಕೊಂಡರು. ಅದೇ ವೇಳೆ ಎರಡನೇ ಸೆಟ್‌ನಲ್ಲಿ ನಿತೇಶ್ ದಿಟ್ಟ ಪ್ರದರ್ಶನ ನೀಡಿದರೂ 18-21ರಿಂದ ಸೋಲನುಭವಿಸಬೇಕಾಯಿತು. ಒಂದು ಬಾರಿ ಈ ಸೆಟ್ 16-16ರಲ್ಲಿ ಸಮವಾಗಿದ್ದಾದರೂ ಇಲ್ಲಿ ನಿತೀಶ್ ಕುಮಾರ್ ಹಿನ್ನಡೆ ಅನುಭವಿಸಿದರು.
ಇದಾದ ಬಳಿಕ ಮೂರನೇ ಸೆಟ್‌ನಲ್ಲಿ ದಿಟ್ಟವಾಗಿ ತಿರುಗೇಟು ನೀಡಿದ ಅವರು 23-21 ಸೆಟ್‌ಗಳಿಂದ ಗೆದ್ದು ಪಂದ್ಯ ಗೆದ್ದರು. ಆದರೆ ಈ ಸೆಟ್ ಗೆಲ್ಲಲೂ ನಿತೇಶ್ ತುಂಬಾ ಕಷ್ಟಪಡಬೇಕಾಯಿತು. ಉಭಯ ಆಟಗಾರರು ತಲಾ ಒಂದು ಅಂಕ ಗಳಿಸಿ ಕೊನೆಯವರೆಗೂ ಹೋರಾಟ ನಡೆಸಿದರು. ಕೆಲವು ಸಂದರ್ಭಗಳಲ್ಲಿ, ಗ್ರೇಟ್ ಬ್ರಿಟನ್‌ನ ಡೇನಿಯಲ್ ಬೆಥೆಲ್ ಮುನ್ನಡೆ ಸಾಧಿಸಿದರು. ಆದಾಗ್ಯೂ ನಿತೀಶ್ ತಾಳ್ಮೆಯ ಆಟವಾಡಿ ಚಿನ್ನದ ಪದಕವನ್ನು ಗೆದ್ದರು. ಪ್ಯಾರಾಲಿಂಪಿಕ್ಸ್‌ನಲ್ಲಿ ನಿತೇಶ್‌ಗೆ ಇದು ಮೊದಲ ಪದಕವಾಗಿದೆ.
Day five of the ongoing Paris Paralympics 2024 fetched another gold medal for India. Para shuttler Nitesh Kumar bagged his first gold medal after beating Great Britain’s Daniel Bethell 21-14, 18-21, 23-21 in the medal match of the men’s singles SL3 class. In the process, he ticked India’s medal tally along to nine