ಮುಕೇಶ್ ಅಂಬಾನಿ ದಂಪತಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಮಹೋತ್ಸದ ಮುಂಚಿನ ಕಾರ್ಯಕ್ರಮದ್ದೇ ಸುದ್ದಿ. ವಿವಾಹಪೂರ್ವ ಕಾರ್ಯಕ್ರಮಗಳು ಮುಗಿದಿದ್ದರೂ ಹಲವು ಮಂದಿ ಇದರ ಗುಂಗಿನಿಂದ ಹೊರಕ್ಕೆ ಬಂದಿಲ್ಲ. ಈ ಕಾರ್ಯಕ್ರಮದಲ್ಲಿ ಹಲವು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಭಿ – ಐಶ್ ಜೋಡಿಯ ಪುತ್ರಿ ಆರಾಧ್ಯ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದು ಮಾತ್ರವಲ್ಲದೆ ಹಲವು ಅನುಮಾನಕ್ಕೆ ಕಾರಣವಾಗಿದೆ.
ಈ ಕಾರ್ಯಕ್ರಮಕ್ಕೆ ವಿದೇಶದಿಂದಲೂ ಅತಿಥಿಗಳು ಆಗಮಿಸಿದ್ದರು. ಅದೇ ರೀತಿ ಅಮಿತಾಭ್ ಬಚ್ಚನ್ ಕುಟುಂಬ ಕೂಡ ಆಗಮಿಸಿತ್ತು. ಕುಟುಂಬ ಸದಸ್ಯರ ಹಲವಾರು ಚಿತ್ರಗಳು ಮತ್ತು ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಪುತ್ರಿ ಆರಾಧ್ಯ ಬಚ್ಚನ್ ಅವರ ಹೇರ್‌ಸ್ಟೈಲ್ ಹೈಲೈಟ್ ಆಗಿತ್ತು. ಆರಾಧ್ಯಾ ಅವರ ಲುಕ್ ಈಗ ಗಮನ ಸೆಳೆದಿತ್ತು.
ಕೆಲವು ವರ್ಷಗಳಿಂದ ಆರಾಧ್ಯ ಅವರು ಯಾವಾಗಲೂ ಒಂದೇ ಹೇರ್‌ಸ್ಟೈಲ್‌ನೊಂದಿಗೆ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಫ್ರೀ ಹೇರ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಈಕೆಯ ಹೊಸ ಕೇಶ ವಿನ್ಯಾಸಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಟಿ ಐಶ್ವರ್ಯಾ ರೈ ಕೈ ಹಿಡಿದುಕೊಂಡು ಕ್ಯಾಮೆರಾಗಳ ಮುಂದೆ ಬಂದ ಆರಾಧ್ಯ ಬಚ್ಚನ್ ಅವರ ಹೊಸ ಲುಕ್ ನೋಡಿ ಎಲ್ಲರು ಹುಬ್ಬುಹಾರಿಸಿದ್ದಾರೆ. ಇಡೀ ಕುಟುಂಬ ಬಹಳ ಸಮಯದ ನಂತರ ಅಂಬಾನಿ ಕುಟುಂಬದ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದೆ. ತನ್ನ ಹೊಸ ಲುಕ್‌ನೊಂದಿಗೆ ಈವೆಂಟ್‌ಗೆ ಬಂದ ಆರಾಧ್ಯ ಮೇಲೆ ಎಲ್ಲರ ಕಣ್ಣುಗಳು ಇದ್ದವು.
ಆರಾಧ್ಯ ಕೆಲವು ತಿಂಗಳ ಹಿಂದೆ ಇದ್ದಿದ್ದಕ್ಕೂ ಮತ್ತು ಈಗ ಕಾಣುವುದಕ್ಕೂ ಸಾಕಷ್ಟು ಬದಲಾವಣೆ ಇದೆ. ಈಕೆ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಅನುಮಾನ ಮೂಡುವಷ್ಟು ಬದಲಾವಣೆ ಕಾಣುತ್ತಿದೆ. ಏಕೆಂದರೆ ಆರಾಧ್ಯಾ ಕೆಲವು ತಿಂಗಳ ಹಿಂದೆ ಇದ್ದಿದ್ದಕ್ಕೂ ಮತ್ತು ಈಗ ಕಾಣುವುದಕ್ಕೂ ಸಾಕಷ್ಟು ಬದಲಾವಣೆ ಇದೆ.
ಇದೀಗ ಅಂಬಾನಿ ಪಾರ್ಟಿಯ ಆರಾಧ್ಯಾ ಅವರ ಹಲವು ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ. ಈಕೆಗೆ ಕೇವಲ 12 ವರ್ಷ 3 ತಿಂಗಳು. ಈ ವಯಸ್ಸಲ್ಲಿ ಆಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಕೊಳ್ಳಬಾರದಿತ್ತು ಎಂದೂ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಆರಾಧ್ಯಾ ಬಚ್ಚನ್ ತನ್ನ ಪೋಷಕರೊಂದಿಗೆ ವಿದೇಶಕ್ಕೆ ಹೋಗಿದ್ದಳು. ಆಗ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರಬಹುದು ಎನ್ನಲಾಗುತ್ತಿದ್ದರೂ ಹೇರ್‌ಸ್ಟೈಲ್ ಬದಲಾವಣೆಯಿಂದ ಸಂಪೂರ್ಣ ಮುಖಚೆಹರೆ ಬದಲಾಗಿ ಕಾಣುವುದು ಸಹಜ ಎನ್ನುವುದು ಮತ್ತೊಂದಿಷ್ಟು ಮಂದಿ ಅಭಿಮತ.