ನೇಪಾಳಕ್ಕೆ ಜು. 24, 2024 ಕರಾಳ ದಿನ. ಕಠ್ಮಂಡುವಿನಲ್ಲಿ ವಿಮಾನ ಪತನಗೊಂಡು ಅದರೊಳಗಿದ್ದ 19 ಮಂದಿಯ ಪೈಕಿ 18 ಜನರು ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಪೈಲಟ್ ತನ್ನ ಜೀವ ಉಳಿಸಿಕೊಳ್ಳುವ ಮೂಲಕ ಆಸ್ಪತ್ರೆ ಸೇರಿದ್ದಾನೆ.
ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. 50 ಪ್ರಯಾಣಿಕರು ಕುಳಿತುಕೊಳ್ಳುವ ಸಿಆರ್ಜಿ 200 ವಿಮಾನವು ಟೇಕಾಫ್ ಆಗುವ ವೇಳೆ ಎಡವಿದೆ. ಬಾನೆತ್ತರಕ್ಕೆ ಹಾರಬೇಕಾಗಿದ್ದ ವಿಮಾನ ರನ್ವೇಯಿಂದ ಜಾರಿ ನೆಲಕಪ್ಪಳಿಸಿದೆ. ನೆಲಕ್ಕೆ ಬಿದ್ದಿದ್ದೇ ತಡ ಕ್ಷಣಾರ್ಧದಲ್ಲಿ ಬೆಂಕಿ ಆವರಿಸಿಕೊಂಡು ವಿಮಾನವನ್ನೇ ಭಸ್ಮ ಮಾಡಿದೆ.
ಸೌರ್ಯ ಏರ್ಲೈನ್ಸ್ ಈ ದುರ್ಘಟನೆ ಸಾಕ್ಷಿಯಾಗಿದೆ. ಇಬ್ಬರು ಸಿಬ್ಬಂದಿಯನ್ನು ಮತ್ತು 17 ಜನರನ್ನು ಹೊತ್ತು ಸಾಗುತ್ತಾ ಫೋಖರಾಗೆ ತೆರಳಬೇಕಾಗಿತ್ತು. ಬೆಳಗ್ಗೆ 11 ಗಂಟೆಗೆ ಸುಮಾರಿಗೆ ಟೇಕಾಫ್ ಆಗಿತ್ತು. ಆದರೆ ಆಕಾಶದೆತ್ತರಕ್ಕೆ ಹಾರದೆ ರನ್ವೇಯಿಂದ ನೇರವಾಗಿ ಕೆಳಕ್ಕೆ ಜಾರಿದೆ.
ತ್ರಿಭುವನ್ ಅಂತ್ರರಾಷ್ಟ್ರೀಯ ನಿಲ್ದಾಣದ ಸುತ್ತ ಆಳವಾದ ಕಮರಿ ಮತ್ತು ಕಣಿವೆಗಳಿಂದ ಕೂಡಿದೆ. ಇದು ವಿಶ್ವದ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. 2023 ನೇಪಾಳದ ಪೋಖರಾದಲ್ಲಿ ಇಂತಹದೇ ಘಟನೆ ನಡೆದಿತ್ತು. ವಿಮಾನವೊಂದು ಪತನಗೊಂಡು 72 ಜನರು ಸಾವನ್ನಪ್ಪಿದ್ದರು.