ನೇಪಾಳದಲ್ಲಿ ಶುಕ್ರವಾರ ರಾತ್ರಿ 6.4 ತೀವ್ರತೆಯಲ್ಲಿ ಸಂಭವಿಸಿದೆ. ಭೂಂಪನದಲ್ಲಿ ಮೃತಪಟ್ಟವರ ಸಂಖ್ಯೆ 70ಕ್ಕೇರಿದ್ದು, 140ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾಗಿ ತಿಳಿದಯಬಂದಿದೆ ಭಾರತದ ರಾಜಧಾನಿ ದೆಹಲಿ ಸೇರಿದಂತೆ ಉತ್ತರದ ಭಾರತದ ಕೆಲವೆಡೆ ಭೂಮಿ ಗಢ ಗಢ ನಡುಗಿದ್ದು, ಸ್ಥಳೀಯ ಜನರು ಭಯಭೀತಗೊಂಡಿದ್ದಾರೆ.
ನೇಪಾಳ ಮಾತ್ರವಲ್ಲದೆ, ಭಾರತದ ದೆಹಲಿ-ಎನ್‌ಸಿಆರ್ ವಲಯ, ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳಲ್ಲಿ ಭೂಕಂಪನವಾಗಿದೆ. ನೇಪಾಳದ ಭೂಕಂಪನ ರಾಷ್ಟ್ರೀಯ ಕೇಂದ್ರ (ಎನ್‌ಸಿಎಸ್)ದ ಪ್ರಕಾರ ಶುಕ್ರವಾರ ರಾತ್ರಿ 11.32 ಕ್ಕೆ 10 ಕಿಮೀ ಆಳದಲ್ಲಿ ಕಂಪನ ಸಂಭವಿಸಿದ್ದು, ನೇಪಾಳದ ಜಾಜರ್ಕೋಟ್ ಜಿಲ್ಲೆಯ ಲಾಮಿದಾಂದಾ ಏರಿಯಾವನ್ನು ಭೂಕಂಪನದ ಕೇಂದ್ರ ಬಿಂದು ಗುರುತಿಸಲಾಗಿದೆ.
ಶುಕ್ರವಾರ ಸಂಭವಿಸಿದ ಭೂಕಂಪವು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಸಂಭವಿಸಿದ ಭೂಕಂಪಗಳ ಸರಣಿಯಲ್ಲಿ ಇತ್ತೀಚಿನದು. ಕೆಲವೇ ದಿನಗಳ ಹಿಂದೆ ಅಂದರೆ, ಅಕ್ಟೋಬರ್ 22ರಂದು 6.1 ತೀವ್ರತೆಯಲ್ಲಿ ನೇಪಾಳದಲ್ಲಿ ಭೂಕಂಪನವಾಗಿತ್ತು.