ಕರ್ನಾಟಕದ ಇಬ್ಬರು ಉಪನ್ಯಾಸಕರಿಗೆ ರಾಷ್ಟ್ರಿಯ ಪ್ರಶಸ್ತಿ ಒಲಿದಿದೆ. ಮೈಸೂರು ಜಿಲ್ಲೆಯ ಹುಣಸೂರು ಮಹಿಳಾ ಪಿಯು ಕಾಲೇಜಿನ ಉಪನ್ಯಾಸಕ ಹೆಚ್ಎನ್ ಗಿರೀಶ್ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಉಪನ್ಯಾಸಕ ನಾರಾಯಣಸ್ವಾಮಿ ಆರ್ ಎಂಬುವವರಿಗೆ ರಾಷ್ಟ್ರಿಯ ಪ್ರಶಸ್ತಿ ಲಭಿಸಿದೆ.
ದಿವಂಗತ ಎಚ್ ಎನ್ ನಿಂಗೇಗೌಡ ಹಾಗೂ ಎಂ ಬಿ ಲಿಲಿತಮ್ಮ ದಂಪತಿ ಪುತ್ರರಾದ ಹೆಚ್ಎನ್ ಗಿರೀಶ್ ಅವರು ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಎಚ್ ಐ ವಿ ಬಗ್ಗೆ ಜಾಗೃತಿ ಮೂಡಿಸಿದ ಮೊಟ್ಟ ಮೊದಲ ಶಿಕ್ಷಕರಾಗಿದ್ದು, ಟಿ ನರಸೀಪುರ ತಾಲ್ಲೂಕಿನ ಬನ್ನೂರು ಗ್ರಾಮದಲ್ಲಿ ಏಡ್ಸ್‌ಮ್ಮ ದೇಗುಲ ಸ್ಥಾಪಿಸಿ ಜಾಗೃತಿ ಮೂಡಿಸಿ ಮೆಚ್ಚುಗೆ ಗಳಿಸಿದ್ದಾರೆ.