ಪ್ರಧಾನಿ ಮೋದಿ ಅವರು ಈಗ ವ್ಯಾಟ್ಸ್‌ಆಪ್ ನಲ್ಲಿ ಲಭ್ಯವಿದ್ದಾರೆ. ವ್ಯಾಟ್ಸ್‌ಆಪ್ ನಲ್ಲಿ ತನ್ನ ಬೆಂಬಲಿಗರೊಂದಿಗೆ ನೇರವಾಗಿ ಸಂವಹನ ನಡೆಸಲು ಅವಕಾಶ ಒದಗಿಸುವ ವ್ಯಾಟ್ಸ್‌ಆಪ್ ನೂತನ ಆವೃತ್ತಿಯಾಗಿರುವ ‘ವ್ಯಾಟ್ಸ್‌ಆಪ್ ಚಾನೆಲ್’ ಅನ್ನು ಪ್ರಧಾನಿ ಅವರು ಆಯ್ಕೆ ಮಾಡಿಕೊಂಡಿದ್ದಾರೆ.
ಇದೀಗ ಒಂದೇ ದಿನಕ್ಕೆ ಪ್ರದಾನಿ ಮೋದಿ 1 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಪಡೆದಿದ್ದಾರೆ. ಅತ್ಯಲ್ಪ ಸಮಯದಲ್ಲಿ ವ್ಯಾಟ್ಸ್‌ಆಪ್ ಚಾನೆಲ್ ಪಡೆದ ಗರಿಷ್ಠ ಫಾಲೋವರ್ಸ್ ಸಂಖ್ಯೆ ಅನ್ನೋ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಚಾನೆಲ್ ಪಾತ್ರವಾಗಿದೆ.
ಇತ್ತೀಚೆಗೆ ವ್ಯಾಟ್ಸ್‌ಆಪ್ ಹೊಸ ಫೀಚರ್ ಆರಂಭಿಸಿತ್ತು. ವ್ಯಾಟ್ಸ್‌ಆಪ್ ಚಾನೆಲ್ ಮೂಲಕ ಅತೀ ದೊಡ್ಡ ಸಂಖ್ಯೆಯಲ್ಲಿ ಜನರನ್ನು ತಲುಪಲು ಸಾಧ್ಯವಿದೆ. ಪ್ರಧಾನಿ ಮೋದಿಯಿಂದ ನೇರವಾಗಿ ಮಾಹಿತಿಗಳು, ಯೋಜನೆಗಳು ಜನರಿಗೆ ತಲುಪಲಿದೆ. ಜನಸಾಮಾನ್ಯರು ಈ ಚಾನಲ್‌ಗೆ ಸೇರ್ಪಡೆಯಾಗುವ ಮೂಲಕ ಪ್ರಧಾನಿ ಮೋದಿ ಅವರು ನೀಡುವ ಮಾಹಿತಿಗಳನ್ನು ಪ್ರತಿಕ್ಷಣವೂ ಪಡೆದುಕೊಳ್ಳಬಹುದಾಗಿದೆ.