Friday, June 13, 2025

ಕುಂಬಳೆ: ಕ್ರಿಕೆಟ್ ಆಟಗಾರ ನೇಣುಬಿಗಿದ ರೀತಿಯಲ್ಲಿ ಪತ್ತೆ

ಕುಂಬಳೆ: ಕ್ರಿಕೆಟಿಗ ನಿಗೂಢ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕುಂಬಳೆ ನಾಯ್ಕಾಪಿನ ವೆಂಕಟೇಶ್ ಮತ್ತು ಜಯಂತಿ ದಂಪತಿಯ ಪುತ್ರ ಮಂಜುನಾಥ ನಾಯಕ್ (25) ಮೃತ ದುರ್ದೈವಿ.

ಜೂ. 7 ರ ಶುಕ್ರವಾರ ರಾತ್ರಿ ಊಟ ಮಾಡಿದ ಬಳಿಕ 11.30ರ ಸುಮಾರಿಗೆ ಯುವಕನಿಗೆ ದೂರವಾಣಿ ಕರೆ ಬಂದಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ‌

ಫೋನ್ ನಲ್ಲಿ ಮಾತನಾಡುತ್ತಾ ಮನೆಯಿಂದ ಹೋದ ಯುವಕ ವಾಪಸ್ ಬಂದಿಲ್ಲ. ಬಹಳ ಸಮಯ ಕಳೆದರೂ ವಾಪಸ್ ಬಾರದೆ ಇದ್ದಾಗ ಕುಟುಂಬಸ್ಥರು ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಶನಿವಾರ ಬೆಳಗ್ಗೆ ಮನೆ ಸಮೀಪದಲ ಮರದ ಕೊಂಬೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ‌. ಕುಂಬಳೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮಂಜುನಾಥ್ ಕುಂಬಳೆ ಪರಿಸರದಲ್ಲಿ ಕ್ರಿಕೆಟ್ ವಲಯದಲ್ಲಿ ಹೆಸರು ಮಾಡುತ್ತಿದ್ದ.‌ ಉತ್ತಮವಾಗಿ ಆಡುತ್ತಿದ್ದ ಈತನ ಸಾವು ಬೇಸರ ತರಿಸಿದೆ.

Related Articles

Latest Articles