ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಆದರೆ ಯಾವುದೇ ಕಾರಣಕ್ಕೂ ಶಿವಮೂರ್ತಿ ಶರಣರು ಚಿತ್ರದುರ್ಗಕ್ಕೆ ಹೋಗುವಂತಿಲ್ಲ. ಬೇಲ್ ಸಿಕ್ಕರೂ ಮುರುಘಾ ಶ್ರೀಗಳಿಗೆ ಬಿಡುಗಡೆಯ ಭಾಗ್ಯವಿಲ್ಲ ಎಂಬಂತಾಗಿದೆ.
ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಜಾಮೀನು ಸಿಕ್ಕರೂ ರಿಲೀಫ್ ಸಿಗಲ್ಲ. ಯಾಕಂದ್ರೆ ಹೈಕೋರ್ಟ್ ಇಂದು ಮೊದಲ ಪೋಕ್ಸೋ & ಅಟ್ರಾಸಿಟಿ ಕೇಸ್‌ನಲ್ಲಿ ಮಾತ್ರವೇ ತನ್ನ ಆದೇಶ ಪ್ರಕಟಿಸಿದೆ.
ಅಂದರೆ, ಒಂದು ಪ್ರಕರಣದಲ್ಲಿ ಮಾತ್ರವೇ ಮುರುಘಾ ಶರಣರಿಗೆ ಬೇಲ್ ಸಿಕ್ಕಿದೆ. ಎರಡನೇ ಪೋಕ್ಸೋ ಪ್ರಕರಣದಲ್ಲಿ ಇನ್ನೂ ಜಾಮೀನು ಪಡೆಯಬೇಕಾಗಿದೆ. ಹೀಗಾಗಿ ಒಂದು ಪ್ರಕರಣದಲ್ಲಿ ಬೇಲ್ ಸಿಕ್ಕರೂ ಸದ್ಯಕ್ಕೆ ಬಿಡುಗಡೆಯ ಸಾಧ್ಯವಿಲ್ಲ.
ಜಾಮೀನು ಮಂಜೂರು ನೀಡಿರುವ ಹೈಕೋರ್ಟ್ ಏಕಸದಸ್ಯ ಪೀಠ ಕೆಲವೊಂದು ಇಬ್ಬರು 2 ಲಕ್ಷದ ಶ್ಯೂರಿಟಿ ನೀಡಬೇಕು. ವಿಚಾರಣಾ ನ್ಯಾಯಾಲಯದ ವಿಚಾರಣೆ ಮುಗಿಯುವ ತನಕ ಚಿತ್ರದುರ್ಗಕ್ಕೆ ಹೋಗಬಾರದು. ವಿಸಿ ಮೂಲಕ ಕೋರ್ಟ್‌ಗೆ ಹಾಜರಾಗಬೇಕು. ಸಾಕ್ಷಿ ಮೇಲೆ ಒತ್ತಡ ಹಾಕಬಾರದು. ಪಾಸ್‌ಪೋರ್ಟ್ ಸರೆಂಡರ್ ಮಾಡಬೇಕು ಎನ್ನಲಾಗಿದೆ.