Saturday, January 25, 2025

ಮುದ್ದಾದ ಹೆಣ್ಣು ಮಗುವಿನ ಜೊತೆ ಕೆರೆಗೆ ಹಾರಿದಳೇ ಮಹಾತಾಯಿ?

ತುಮಕೂರು: 11 ತಿಂಗಳ ಹಸುಗೂಸು, 4 ವರ್ಷದ ಹೆಣ್ಣು ಮಗುವಿನ ಜೊತೆ ತಾಯಿಯು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಗುಬ್ಬಿಯಲ್ಲಿ ನಡೆದಿದೆ. ಗುಬ್ಬಿ ತಾಲೂಕಿನ ನಿಟ್ಟೂರು ಕೆರೆಯಲ್ಲಿ ತಾಯಿ, ಮಕ್ಕಳ ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.

ನಿಟ್ಟೂರು ಗ್ರಾಮದ ವಿಜಯಲಕ್ಷ್ಮಿ ಎನ್ನುವರು ತನ್ನ 11 ತಿಂಗಳ ಮಗು ಯದು ನಾಯಕ್ ಹಾಗೂ 4 ವರ್ಷದ ಹೆಣ್ಣು ಮಗುವಿನ ಜೊತೆ ಕೆರೆಗೆ ಹಾರಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರೆಲ್ಲ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಅಗ್ನಿಶಾಮಕ ಸಿಬ್ಬಂದಿ ಕೆರೆಯಲ್ಲಿ ಹುಡುಕಾಟ ನಡೆಸಿದ್ದಾರೆ.

ವಿಜಯಲಕ್ಷ್ಮಿ ಅವರು ನನ್ನ ಸಾವಿಗೆ ನಾನೇ ಕಾರಣವೆಂದು ಡೆತ್ ನೋಟ್ ಬರೆದಿಟ್ಟು ಕೆರೆಗೆ ಹಾರಿದ್ದಾರೆ. ಒಂದು ವರ್ಷದ ಹಿಂದೆ ಪತಿ‌ ನವೀನ್ ಅನಾರೋಗ್ಯದಿಂದ‌ ಸಾವನ್ನಪ್ಪಿದ್ದ. ಈಗ 11 ತಿಂಗಳ ಮಗುವಿಗೂ ಶ್ವಾಸಕೋಶದ ಸಂಬಂಧಿ ಕಾಯಿಲೆ ಇದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ವಾಸಿಯಾಗಿರಲಿಲ್ಲ. ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಶರಣಾಗುತ್ತಿದ್ದೇನೆ ಎಂದು ವಿಜಯಲಕ್ಷ್ಮಿ ಅವರು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.

Related Articles

Latest Articles