Sunday, December 8, 2024

ಹಾವೇರಿ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್; ಲಾಡ್ಜ್‌ನಲ್ಲಿ ಹಲ್ಲೆ ಬಳಿಕ ಕಾಡಿನಲ್ಲಿ ಗ್ಯಾಂಗ್ ರೇಪ್ ಆರೋಪ

ಹಾವೇರಿ ಜಿಲ್ಲೆಯಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಅನ್ಯಕೋಮಿನ ಪುರುಷನೊಂದಿಗೆ ಸಿಕ್ಕಿ ಬಿದ್ದ ಮಹಿಳೆಯನ್ನು ಥಳಿಸಿ, ಖಾಸಗಿ ಅಂಗಾಗವನ್ನು ಗಾಸಿ ಗೊಳಿಸಿ ಗ್ಯಾಂಗ್ ರೇಪ್ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಈ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು ಉಳಿದ ಆರೋಪಿಗಳಿಗೆ ಬಲೆ ಬೀಸಲಾಗಿದೆ. ಮತ್ತೊಂದೆಡೆ ನೈತಿಕ ಪೊಲೀಸ್ ಗಿರಿ ಪ್ರಕರಣದ ಆರೋಪಿಗಳ ಮತ್ತೊಂದು ವಿಡಿಯೋ ವೈರಲ್ ಆಗಿದೆ.

‘ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನವರಾದ ಪುರುಷ ಮತ್ತು ಮಹಿಳೆ ಶನಿವಾರ ನಾಲ್ಕರ್ ಕ್ರಾಸ್ ಬಳಿ ಹೋಟೆಲ್‌ನಲ್ಲಿ ಕೊಠಡಿ ಬಾಡಿಗೆಗೆ ಪಡೆದು ತಂಗಿದ್ದರು. ಆಟೊ ಚಾಲಕನೊಬ್ಬ ನೀಡಿದ ಮಾಹಿತಿ ಮೇರೆಗೆ ಅಕ್ಕಿಆಲೂರಿನ ಐವರು ಯುವಕರು ಹೋಟೆಲ್‌ನ ಕೊಠಡಿಗೆ ನುಗ್ಗಿ, ಇಬ್ಬರನ್ನೂ ಎಳೆದಾಡಿ ಹಲ್ಲೆ ಮಾಡಿದ್ದಾರೆ. ಇದರ ವಿಡಿಯೊಗಳು ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ’ ಎಂದು ಹಾನಗಲ್‌ ಠಾಣೆ ಪೊಲೀಸರು ತಿಳಿಸಿದ್ದಾರೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಅಫ್ತಾಬ್ ಮಕ್ಯೂಲ್ ಅಹ್ಮದ್ ಚಂದನಕಟ್ಟಿ (24), ಮದರ್‌ಸಾಬ್ ಮಹ್ಮದ್ ಇಸಾಕ್ ಮಂಡಕ್ಕಿ (23) ಎಂಬುವರನ್ನು ಬಂಧಿಸಲಾಗಿದೆ. ಇನ್ನೂ ಮೂವರು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆದಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಂಶುಕುಮಾರ ತಿಳಿಸಿದ್ದಾರೆ.

ಹಲ್ಲೆ ಮಾಡುವಾಗ ವಿಡಿಯೋ ಮಾಡಿಕೊಂಡಿದ್ದರು. ಈಗಾ ಈ ಘಟನೆಯ 2 ವಿಡಿಯೋ ವೈರಲ್ ಆಗಿದೆ. ಇದೀಗ ಎರಡನೇ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಾನಗಲ್ ಜನರು ಬೆಚ್ಚಿ ಬಿದ್ದಿದ್ದಾರೆ. ಆರೋಪಿಗಳು ಮುಸ್ಲಿಂ ಮಹಿಳೆಯನ್ನು ಕಾರಿನಲ್ಲಿ ಎಳೆದೊಯ್ದು ಚಿತ್ರಹಿಂಸೆ ನೀಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.

ಹೋಟೆಲ್​ನಲ್ಲಿ ಹಲ್ಲೆ ಮಾಡಿದ ಬಳಿಕ ಅರಣ್ಯ ಪ್ರದೇಶಕ್ಕೆ ಕಾರಿನಲ್ಲಿ ಕರೆದೊಯ್ದು 7 ಮುಸ್ಲಿಂ ಯುವಕರು ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಹಿಂದೂ ಪುರುಷನ ಜೊತೆ ಲಾಡ್ಜ್​ನಲ್ಲಿ ಕಾಣಿಸಿಕೊಂಡಿದ್ದಕ್ಕೆ ಮಹಿಳೆ ಮೇಲೆ ಗ್ಯಾಂಗ್ ರೇಪ್? ಮಾಡಲಾಗಿದೆ ಎನ್ನಲಾಗುತ್ತಿದೆ. ಒಬ್ಬರಾದ ಮೇಲೆ ಒಬ್ಬರು ನನ್ನ ರೇಪ್ ಮಾಡಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ. ಮತ್ತೊಂದೆಡೆ ತನ್ನ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ ಎಂದು ಮಹಿಳೆಯ ಪತಿ ಕೂಡ ಹೇಳಿಕೆ ನೀಡಿದ್ದಾರೆ. ಜಂಗಲ್​ನಲ್ಲಿ ರೇಪ್ ಮಾಡಿದ್ದ ವಿಡಿಯೋ ಇದೆ ಎಂದು ಮಹಿಳೆಯ ಪತಿ ಆರೋಪಿಸಿದ್ದಾರೆ.

ಈ ಹಿಂದೆ ಈ ಪ್ರಕರಣದ ಕುರಿತು ಸ್ವತಃ ಸಂತ್ರಸ್ತೆ ಮಾಧ್ಯಮಕ್ಕೆ ಸ್ಪಷ್ಟೀಕರಣ ನೀಡಿ ನನಗೆ ಐದಾರು ಅಪರಿಚಿತ ಯುವಕರು ನಾನು ತಂಗಿದ್ದ ಹೋಟೆಲ್ ಗೆ ನುಗ್ಗಿ ಹಲ್ಲೆ ಮಾಡಿ ನನ್ನ ಖಾಸಗಿ ಅಂಗಾಂಗಗಳನ್ನು ಘಾಸಿಗೊಳಿಸಿದ್ದಾರೆ ಎಂದು ತಿಳಿಸಿದ್ದರು. ಆದರೆ ನನ್ನ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂದು ಆಕೆ ಹೇಳಿರಲಿಲ್ಲ.

ನೈತಿಕ ಪೊಲೀಸ್​ಗಿರಿ ಯಾರೇ ನಡೆಸಿದ್ರೂ ಮುಲಾಜಿಲ್ಲದೆ ಕ್ರಮ
ಹಾವೇರಿ ಜಿಲ್ಲೆಯ ಹಾನಗಲ್​ನಲ್ಲಿ ನೈತಿಕ ಪೊಲೀಸ್​ಗಿರಿ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ ಡಿಜಿ & ಐಜಿಪಿ ಅಲೋಕ್ ಮೋಹನ್ ಎಚ್ಚರಿಕೆ ನೀಡಿದ್ದಾರೆ. ನೈತಿಕ ಪೊಲೀಸ್​ಗಿರಿ ಯಾರೇ ನಡೆಸಿದ್ರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತೆ. ಇಂತಹ ಘಟನೆ ಎಲ್ಲೇ ನಡೆದ್ರೂ ತಕ್ಷಣ ಕ್ರಮ ಕೈಗೊಳ್ಳುತ್ತಿದ್ದೇವೆ. ಸಮಾಜದಲ್ಲಿ ಎಲ್ಲರಿಗೂ ಕಾನೂನು ಒಂದೇ ಎಂದರು.

Related Articles

Latest Articles