ಮಂಗಳೂರು: ಮಾಜಿ ಶಾಸಕ ಮೊಯ್ದಿನ್ ಬಾವಾ ಅವರ ಮೇಲೆ ಬೀದಿ ನಾಯಿ ದಾಳಿ ಮಾಡಿದ ಘಟನೆ ನಗರದ ಕದ್ರಿ ಪಾರ್ಕ್ ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಅವರು ಕದ್ರಿ ಪಾರ್ಕಿಗೆ ವಾಕಿಂಗ್ ಬಂದ ಸಂದರ್ಭ ಈ ಘಟನೆ ನಡೆದಿದ್ದು, ವಾಕಿಂಗ್ ಮಾಡುತ್ತಿರುವ ಸಂದರ್ಭ ಬೀದಿ ನಾಯಿ ಬಾವಾ ಅವರ ಮೇಲೆ ದಾಳಿ ಮಾಡಿದೆ. ಕಾಲಿಗೆ ಬಲವಾದ ಏಟು ಬಿದ್ದ ಬಾವಾ ಅವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಬೀದಿ ನಾಯಿ ದಾಳಿಯಿಂದ ಕಾಲಿಗೆ ಬಲವಾದ ಏಟು ಬಿದ್ದಿದ್ದರಿಂದ ಗಾಲಿ ಕುರ್ಚಿ ಆಶ್ರಯಿಸಬೇಕಾಗಿದೆ. ಘಟನೆ ನಡೆದ ಕೂಡಲೇ ಸ್ಥಳದಿಂದ ಜಿಲ್ಲಾಧಿಕಾರಿ , ಪಾಲಿಕೆ ಆಯುಕ್ತರಿಗೆ ಬಾವಾ ಅವರು ಫೋನ್ ಮಾಡಿ ವಿಷಯ ತಿಳಿಸಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಕದ್ರಿ ಪಾರ್ಕಿನಲ್ಲಿ ಸಾಕು ನಾಯಿಗಳು ತರಲು ನಿಷೇಧ ವಿದ್ದರೂ ಬೀದಿ ನಾಯಿಗಳು ಇಲ್ಲಿ ಭಾರಿ ಸಂಖ್ಯೆಯಲ್ಲಿದ್ದು ಬೆಳಗ್ಗಿನ ಸಮಯ , ಹಾಗೂ ಸಂಜೆ ಹೊತ್ತು ವಾಕಿಂಗ್ ಬರುವವರಿಗೆ ಈ ಬೀದಿ ನಾಯಿಗಳು ಭಯ ಹುಟ್ಟಿಸುತ್ತಿವೆ. ಅದರಲ್ಲೂ ವೃದ್ದರು, ಮಹಿಳೆಯರು ಮಕ್ಕಳು ಪಾರ್ಕಿಗೆ ಹೆಚ್ಚಾಗಿ ಬರುತ್ತಿದ್ದು ಬೀದಿ ನಾಯಿಗಳು ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಗಳಿಗೆ ಆದ್ದರಿಂದ ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಲು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.