ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಬಾಲಕಿಯೊಬ್ಬಳು ಮಾಡಿದ ಚಿತ್ರವನ್ನು ಸ್ವೀಕರಿಸುವ ವಿಡಿಯೋ ಕೋಟ್ಯಾಂತರ ಮಂದಿಯ ಮೆಚ್ಚುಗೆ ಗಳಿಸಿದೆ. ಅಷ್ಟಕ್ಕೂ ಈ ವಿಡಿಯೋ ಎಲ್ಲಿಯದ್ದು? ಯಾವಾಗದ್ದು ಎಂಬುವುದನ್ನು ತಿಳಿಯೋಣ.

ಲೋಕಸಭೆ ಚುನಾವಣೆ 2024 ಸಮೀಪಿಸುತ್ತಿದ್ದಂತೆ, ಮಾರ್ಚ್ 01 ರಂದು ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳಕ್ಕೆ ಆಗಮಿಸಿದ್ದಾರೆ. ಪಿಎಂ ಮೋದಿ ಅವರು ಆರಂಬಾಗ್‌ನಲ್ಲಿ 7,200 ಕೋಟಿ ರೂಪಾಯಿಗಳ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು. ಈ ವೇಳೆ ನಡೆದ ಘಟನೆಯಿದು.
ಪ್ರಧಾನಿ ಅವರು ಬಿಜೆಪಿ ಗಣ್ಯರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾಗ ಸಂಭವಿಸಿದ ಸಾಮಾನ್ಯ ಘಟನೆಗೆ ಸುದ್ದಿಯಾಗಿದೆ. ಶ್ರೀ ಜಗನ್ನಾಥ ದೇವರ ವರ್ಣಚಿತ್ರವನ್ನು ಹಿಡಿದಿರುವ ಬಾಲಕಿ ಅದನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಲು ಬಯಸಿದ್ದಳು. ಯುವತಿಯನ್ನು ಗಮನಿಸಿದ ಪ್ರಧಾನಿ ಮೋದಿ ಕೂಡಲೇ ತಮ್ಮ ಭದ್ರತಾ ಸಿಬ್ಬಂದಿಗೆ ಪೇಂಟಿಂಗ್ ತರುವಂತೆ ಹೇಳಿದ್ದಾರೆ. ತಕ್ಷಣವೇ ಭದ್ರತಾ ಸಿಬ್ಬಂದಿ ಆ ಚಿತ್ರವನ್ನು ತಂದು ಮೋದಿಗೆ ಒಪ್ಪಿಸಿದ್ದಾರೆ. ಮೋದಿ ನೆರೆದವರ ಲಕ್ಷಾಂತರ ಮಂದಿಯ ಮುಂದೆ ಆಕೆಯ ಚಿತ್ರವನ್ನು ತೋರಿಸಿದ್ದಾರೆ. ಈ ವಿಡಿಯೋ ಬಹಳ ಮೆಚ್ಚುಗೆ ಗಳಿಸಿದೆ. ಕೆಲವೊಬ್ಬರು ಈ ಎಲೆಕ್ಷನ್ ಗಿಮಿಕ್ ಎಂದು ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ.