Saturday, June 22, 2024

ಏಕಕಾಲದಲ್ಲಿ ವಿಪತ್ತು ಅಲರ್ಟ್..! ವಿದ್ಯಾರ್ಥಿಗಳ ಪಾಲಿಗೆ ಆಪತ್ತು

ಪುತ್ತೂರು: ಭಾರತ ದೂರ ಸಂಪರ್ಕ ಇಲಾಖೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ ವಿಪತ್ತು ಸಂದರ್ಭದಲ್ಲಿ ದೇಶದ ಜನತೆಗೆ ಮೊಬೈಲ್ ಮೂಲಕ ಎಚ್ಚರಿಕೆಯ ಸಂದೇಶವನ್ನು ನೀಡುವ ಬಗ್ಗೆ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಕರ್ನಾಟಕದ ಹಲವು ವ್ಯಾಪ್ತಿಯಲ್ಲಿ ನಿನ್ನೆ ಬೆಳಿಗ್ಗೆ 11.45ರ ಸುಮಾರಿಗೆ ಧ್ವನಿ ಮತ್ತು ಕಂಪನದೊಂದಿಗೆ ಮೊಬೈಲ್ ಗಳಿಗೆ ಎಚ್ಚರಿಕೆ ಸಂದೇಶ ಬಂದಿದೆ. ಆದರೆ ಈ ಧ್ವನಿ ಮತ್ತು ಕಂಪನಕ್ಕೆ ಅನೇಕ ಕಾಲೇಜು ವಿದ್ಯಾರ್ಥಿಗಳ ಪಾಲಿಗೆ ಆಪತ್ತಾಗಿ ಪರಿಣಮಿಸಿದೆ.

ಹೌದು ತರಗತಿಯೊಳಗೆ ಮೊಬೈಲ್ ಗೆ ನಿರ್ಬಂಧ ಹೇರಲಾಗಿತ್ತಾದರೂ ಇವತ್ತು ಮೊಳಗಿದ ಬೀಪ್ ಸೌಂಡ್ ಗೆ ಪುತ್ತೂರಿನ ಕಾಲೇಜೊಂದರಲ್ಲಿ ತರಗತಿಯೊಳಗೆ ಹಲವು ವಿದ್ಯಾರ್ಥಿಗಳ ಮೊಬೈಲ್ ಫೋನ್ ಶಿಕ್ಷಕರ ವಶಕ್ಕೆ ಸೇರಿದೆ.

ಮೊಬೈಲ್ ಸೈಲೆಂಟ್ ಮಾಡಿ ತರಗತಿಯೊಳಗೆ ಹೋದ ವಿದ್ಯಾರ್ಥಿಗಳೆಲ್ಲರ ಮೊಬೈಲ್ ಏಕಕಾಲಕ್ಕೆ ಧ್ವನಿ ಮತ್ತು ಕಂಪನವಾಗಿದೆ. ಈ ಶಬ್ದ ಶಿಕ್ಷರನ್ನು ಎಚ್ಚರಿಸಿದೆ. ಶಿಕ್ಷಕರು ಮೊಬೈಲ್ ಗಳನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

Related Articles

Latest Articles