ಭಾರತದ ನೆಲದಲ್ಲಿ 71ನೇ ಅವೃತ್ತಿಯ ಮಿಸ್ ವರ್ಲ್ಡ್ ಸೌಂದರ್ಯ ಸ್ಪರ್ಧೆ ನಡೆಯುತ್ತಿದ್ದು ಇಂದು ಅಂತಿಮ ದಿನವಾಗಿದೆ. ಸುಮಾರು 120 ದೇಶಗಳ ಸುಂದರಿಯರು ಆಗಮಿಸಿ “ಬ್ಯೂಟಿ ವಿಥ್ ಬ್ರೈನ್ “ಖ್ಯಾತಿಯ ಈ ಸ್ಪರ್ಧೆಯಲ್ಲಿ ಹಲವಾರು ಹಂತಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಮಾರ್ಚ್ 9ರಂದು ಅಂದರೆ ಇಂದು, ಇದರ ಫೈನಲ್ ಸ್ಪರ್ಧೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯುತ್ತಿದೆ. ಪ್ರಬಲ ಪೈಪೋಟಿ ಏರ್ಪಟ್ಟಿದ್ದು ಯಾರ ಪಾಲಿಗೆ ಕಿರೀಟ ಸಿಗಲಿದೆ ಅನ್ನುವುದು ಸದ್ಯದ ಕೌತುಕ.

2022 ರ ಮಿಸ್ ಇಂಡಿಯಾ ಖ್ಯಾತಿಯ ಸಿನಿ ಶೆಟ್ಟಿ ಭಾರತವನ್ನು ಈ ಸ್ಪರ್ಧೆಯಲ್ಲಿ ಪ್ರತಿನಿಧಿಸಲಿದ್ದು, ಈಗಾಗಲೇ ಟಾಪ್ 20ರ ಹಂತವನ್ನು ಪ್ರವೇಶಿಸಿದ್ದಾರೆ. ಕರಾವಳಿ ಬೆಡಗಿಯನ್ನು ವಿಶ್ವ ಸುಂದರಿಯಾಗಿ ನೋಡುವುದಕ್ಕೆ ಜನರು ಕಾಯುತ್ತಿದ್ದಾರೆ. ಆಲ್ ದಿ ಬೆಸ್ಟ್ ಸಿನಿ ಶೆಟ್ಟಿ.