ಕಾಸರಗೋಡು: ಅಪ್ರಾಪ್ತನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹತ್ತು ವರ್ಷದ ಬಾಲಕನನ್ನು ಅಂಗಡಿಗೆ ಕರೆದೊಯ್ದು ಕಿರುಕುಳ ನೀಡಿದ ಬಗ್ಗೆ ನೀಡಿದ ದೂರಿನಂತೆ ಉಪ್ಪಳ ಆರ್‌ಎಸ್ ರೋಡ್‌ನ ರುಕ್ಸಾನ ಮಂಜಿಲ್‌ನ ಶೇಕ್ ಮೊಯ್ದಿನ್ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಶೇಕ್ ಮೊಯ್ದಿನ್‌ಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ನ್ಯಾಯಾಲಯದ ಆದೇಶದ ಮೇಲೆ ಕಾಸರಗೋಡು ಜೈಲಿನಲ್ಲಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.