ಐವನ್ ಡಿಸೋಜಾ ಓರ್ವ ಭಯೋತ್ಪಾದಕ. ತಾಕತ್ತಿದ್ದರೆ ನನ್ನ ಮೇಲೆ ರೌಡಿಶೀಟರ್ ಹಾಕಲಿ ನೋಡೋಣ ಎಂದು ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಸವಾಲು ಹಾಕಿದ್ದಾರೆ. ಬಾಂಗ್ಲಾ ಮಾದರಿ ದಾಳಿ ಮಾಡುತ್ತೇವೆ ಎಂಬ ಡಿಸೋಜಾ ಹೇಳಿಕೆ ಸಂಬಂಧ ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರತಿನಿಧಿಯೊಂದಿಗೆ ಶಾಸಕ ವೇದವ್ಯಾಸ ಕಾಮತ್ ಮಾತನಾಡಿದ್ದಾರೆ.
ಕಾಂಗ್ರೆಸ್ ನ ನಾಯಕರಿಗೆ ತಾಕತ್ತಿದ್ರೆ ನನ್ನ ಮೇಲೆ ರೌಡಿಶೀಟ್ ಓಪನ್ ಮಾಡಲಿ. ಕಾಂಗ್ರೆಸ್ ತಪ್ಪನ್ನು ತೋರಿಸಿದವರಿಗೆ ರೌಡಿಶೀಟರ್ ತೆರೆಯೋದು ಇವರ ಜಾಯಮಾನ. ಇಂತಹ ದೇಶದ್ರೋಹಿಗಳ ವಿರುದ್ಧ ಧ್ವನಿಯೆತ್ತಿದ್ರೆ ರೌಡಿಶೀಟರ್ ಕೇಸ್ ಹಾಕುವುದು ನಿಮ್ಮ ಡಿಎನ್‌ಎಯಲ್ಲೇ ಇದೆ. ಇದಕ್ಕೆಲ್ಲ ನಾವು ಹೆದರಲ್ಲ ಎಂದು ವಾಗ್ದಾಳಿ ನಡೆಸಿದರು.
- ಲಾರಿಗೆ ಡಿಕ್ಕಿಯಾಗಿ ಬೈಕ್ ಸವಾರ ಸಾವು
- ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರಂಟಿ ಹೊರೆ: ಬೊಕ್ಕಸಕ್ಕೆ 12 ಸಾವಿರ ಕೋಟಿ ರೂ. ಕೊರತೆ
- ಓದಲು ಹೋಗಿ ಪ್ರೀತಿಯಲ್ಲಿ ಬಿದ್ದ ಯುವಕ.. ಭಾರತೀಯ ಸಂಪ್ರದಾಯದಂತೆ ಫ್ರಾನ್ಸ್ ಯುವತಿ ಜೊತೆ ಮದುವೆ
- ಅಯೋಧ್ಯಾ ರಾಮಮಂದಿರದಲ್ಲಿ ಮೊದಲ ದೀಪಾವಳಿಯ ಸಂಭ್ರಮ; ಎಷ್ಟು ಲಕ್ಷ ದೀಪಗಳು ಬೆಳಗಲಿವೆ ಗೊತ್ತಾ?
- ಇಂಡಿಯನ್ ಪ್ರೀಮಿಯರ್ ಲೀಗ್ 2025: ಆರ್ಸಿಬಿ ತಂಡಕ್ಕೆ ಸ್ಟಾರ್ ಆಲ್ರೌಂಡರ್ ರೀ ಎಂಟ್ರಿ
ದೇಶದ್ರೋಹದ ಹೇಳಿಕೆ ನೀಡಿದ್ದನ್ನು ವಿರೋಧಿಸುವವರ ಮೇಲೆ ರೌಡಿಶೀಟರ್ ಹಾಕುತ್ತಿರಲ್ಲ ಹಾಗಿದ್ರೆ ರಾಜ್ಯಪಾಲರ ವಿರುದ್ಧ ಮಾತನಾಡಿದ, ರಾಜಭವನದ ಮೇಲೆ ಬಾಂಗ್ಲಾ ಮಾದರಿ ಉಗ್ರದಾಳಿ ನಡೆಸುವ ಬೆದರಿಕೆ ಹಾಕಿದ ಐವನ್ ಡಿಸೋಜಾ ಮೇಲೆ ಯಾವ ಶೀಟರ್ ಹಾಕಬೇಕು? ಅವರ ಮೇಲೆ ರೌಡಿ ಶೀಟರ್ ಅಲ್ಲ, ಐವನ್ ಓರ್ವ ಭಯೋತ್ಪಾದಕ ಎಂದೇ ಹೇಳಬೇಕು.
ಭಯೋತ್ಪಾದಕರು ಬಾಂಗ್ಲಾದಿಂದ ನುಸುಳಿ ಬಂದು ಇಲ್ಲಿ ಇರ್ತಾರೆ. ಹಾಗಾಗಿ ವೇದವ್ಯಾಸ ಕಾಮತ್ ರೌಡಿಶೀಟರ್ ಆದ್ರೆ ಐವನ್ ಡಿಸೋಜ್ ಭಯೋತ್ಪಾದಕ. ಭಯೋತ್ಪಾದಕ ಐವನ್ ಡಿಸೋಜಾರಿಂದ ಬಿಜೆಪಿ ಕಲಿತುಕೊಳ್ಳುವಂತದ್ದು ಏನೂ ಇಲ್ಲ. ನೀವೇ ದೊಂಬಿ ಗಲಾಟೆ ಎಬ್ಬಿಸ್ತಿರಿ ಅನ್ನೋದು ರಾಜ್ಯಕ್ಕೆ ಗೊತ್ತಿದೆ ಎಂದು ತಿರುಗೇಟು ನೀಡಿದರು.