Wednesday, February 19, 2025

ಮಂಗಳೂರು ವಿಶ್ವವಿದ್ಯಾನಿಲಯದ ನೂತನ ಕುಲಸಚಿವರಾಗಿ ಡಾ. ಯತೀಶ್ ಉಳ್ಳಾಲ್

ಮಂಗಳೂರು ವಿಶ್ವವಿದ್ಯಾನಿಲಯದ ನೂತನ ಕುಲಸಚಿವರಾಗಿ (ಆಡಳಿತ) ಕೆಎಎಸ್‌ (ಹಿರಿಯ ಶ್ರೇಣಿ)ಅಧಿಕಾರಿ ಮಡಿಕೇರಿ ಉಪ ವಿಭಾಗಾಧಿಕಾರಿಯಾಗಿದ್ದ ಡಾ| ಯತೀಶ್‌ ಉಳ್ಳಾಲ್‌ ಅವರನ್ನು ನಿಯುಕ್ತಿಗೊಳಿಸಿ ಸರಕಾರ ಆದೇಶಿಸಿದೆ.

ಇಲ್ಲಿಯವರೆಗೆ ಕೆಎಎಸ್‌ ಅಧಿಕಾರಿ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜು ಕೆ. ಅವರು ಪ್ರಭಾರ ನೆಲೆಯಲ್ಲಿ ಮಂಗಳೂರು ವಿ.ವಿ. ಕುಲಸಚಿವರಾಗಿ ಕರ್ತವ್ಯದಲ್ಲಿದ್ದರು.

ಕುಲಪತಿ ಆಯ್ಕೆ ಬಾಕಿ!
ಈ ಮಧ್ಯೆ ಜೂನ್‌ನಿಂದಲೇ ಖಾಲಿಯಾಗಿರುವ ಮಂಗಳೂರು ವಿ.ವಿ. ಕುಲಪತಿ ಹುದ್ದೆಯ ನೇಮಕಕ್ಕೆ ಸರಕಾರ ಇನ್ನೂ ಮನಸ್ಸು ಮಾಡಿಲ್ಲ. ಶೋಧನಾ ಸಮಿತಿ ಈಗಾಗಲೇ ಕೆಲವರ ಹೆಸರನ್ನು ಶಿಫಾರಸು ಮಾಡಿದ್ದರೂ ಕುಲಪತಿ ನೇಮಕ ಮಾತ್ರ ಇನ್ನೂ ಅಂತಿಮವಾಗದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

Related Articles

Latest Articles