ಮಂಗಳೂರು: ನಗರದ ಮೇರಿಹೀಲ್ ಹೆಲಿಪ್ಯಾಡ್ ಬಳಿ ಮಾದಕ ವಸ್ತುವಾದ ಮೆಥಾಎಂಪೈಟಮೈನ್ ಅನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದವನನ್ನು ಫೆ.1 ರಂದು ಬಂಧಿಸಲಾಗಿದೆ.
ಮೊಹಮ್ಮದ್ ಫರಾಜ್ ಎಂಬಾತ ಬಂಧಿತ ಆರೋಪಿ. ಮಂಗಳೂರು ಉತ್ತರ ಉಪ ವಿಭಾಗದ ಡ್ರಗ್ಸ್ ಸ್ಕ್ವಾಡ್ ಸಿಬಂದಿ ಮತ್ತು ಕಾವೂರು ಪೊಲೀಸ್ ಠಾಣಾ ಸಿಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅರೊಪಿಯನ್ನು ಬಂಧಿಸಿದ್ದಾರೆ.
30,000 ರೂ ಮೌಲ್ಯದ 7.28 ಗ್ರಾಂ ಮೆಥಾಎಂಪೆಟಮೈನ್ ಮತ್ತು ಒಂದು ಲಕ್ಷ ರೂ.ಮೌಲ್ಯದ ಸ್ಕೂಟರ್ ವಶಕ್ಕೆ ಪಡೆಯಲಾಗಿದೆ. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.