ರಾಷ್ಟ್ರೀಯ ಹೆದ್ದಾರಿ 73ರ ನಂತೂರು – ಪಡೀಲ್ ನಡುವಿನ ನಿಡ್ಡೇಲ್ ಕ್ರಾಸ್ ಬಳಿ ಶನಿವಾರ ನಸುಕಿನ ವೇಳೆ ಬೈಕೊಂದು ಸವಾರನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ.
ಈ ಘಟನೆಯಲ್ಲಿ ಗಂಭೀರ ಗಾಯಗೊಂಡ ಸಹಸವಾರ ಫರಂಗಿಪೇಟೆ ನಿವಾಸಿ ಕೀರ್ತಿಕ್ (21) ಎಂಬುವರು ಮೃತಪಟ್ಟಿದ್ದಾರೆ.
ಮುಂಜಾನೆ ಸುಮಾರು 3.25ರ ಸುಮಾರಿಗೆ ಘಟನೆ ನಡೆದಿದೆ. ನಿಡ್ಡೇಲ್ ಕ್ರಾಸ್ ತಿರುವು ರಸ್ತೆಯಲ್ಲಿ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ಬೈಕ್ ಚರಂಡಿಗೆ ಬಿದ್ದಿದೆ. ಪ್ರಜ್ಞಾಹೀನರಾಗಿ ಬಿದ್ದಿದ್ದ ಕೀರ್ತಿಕ್ ಅವರನ್ನು ಸಾರ್ವಜನಿಕರು ಉಪಚರಿಸಿ, ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಪರಿಶೀಲಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮಂಗಳೂರು ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಬಾಹ್ಯಾಕಾಶದಿಂದ ಮಹಾ ಕುಂಭಮೇಳ ಹೇಗೆ ಕಾಣಿಸುತ್ತೆ? ಫೊಟೋ ಬಿಡುಗಡೆ ಮಾಡಿದ ಇಸ್ರೋ
- ಕಾಸರಗೋಡು: ಪೈಂಟಿಂಗ್ ಕೆಲಸದಲ್ಲಿ ನಿರತನಾಗಿದ್ದ ಯುವಕನಿಗೆ ಚೂರಿ ಇರಿತ – ಓರ್ವನ ಬಂಧನ
- ಮಂಗಳೂರು ಮಸಾಜ್ ಪಾರ್ಲರ್ ಮೇಲೆ ದಾಳಿ; ಪ್ರಸಾದ್ ಅತ್ತಾವರ ಸೇರಿ 14 ಮಂದಿ ಬಂಧನ
- ಅಮೆರಿಕಾದಲ್ಲಿ ಅವಧಿಗೂ ಮುನ್ನ ಹೆರಿಗೆಗೆ ಮುಗಿಬಿದ್ದ ಅನಿವಾಸಿ ಭಾರತೀಯರು; ಪೌರತ್ವಕ್ಕೂ, ಹೆರಿಗೆಗೂ ಏನ್ ನಂಟು?
- ಚೊಚ್ಚಲ ವಿಶ್ವಕಪ್ಗೆ ಮುತ್ತಿಟ್ಟ ಭಾರತ.! ಖೋ ಖೋದಲ್ಲಿ ಮಹಿಳೆಯರು, ಪುರುಷರು ಇಬ್ಬರಿಗೂ ವರ್ಲ್ಡ್ಕಪ್