Monday, October 14, 2024

ಆರ್ಥಿಕ ಸಮಸ್ಯೆಯಿಂದ ಸ್ಥಗಿತಗೊಂಡ ಮಂಗಳ ಯಾನ..! ಕನ್ನಡಿಗರ ಮನೆಮಾತಾಗಿದ್ದ ವಾರ ಪತ್ರಿಕೆ ಇನ್ಮುಂದೆ ಕೈಸೇರಲ್ಲ

ಕೋಟ್ಯಾಂತರ ಕನ್ನಡಿಗರ ಹೃದಯ ತಲುಪಿ ಮನೆ ಮಾತಾಗಿದ್ದ ಮಂಗಳ ವಾರಪತ್ರಿಕೆ ತನ್ನ ಪ್ರಕಟಣೆ ನಿಲ್ಲಿಸಿದೆ. ಈ ವಾರ ಕೊನೆಯ ಸಂಚಿಕೆ ಮುದ್ರಣಗೊಂಡಿದೆ. ಈ ಬಗ್ಗೆ ಅಧಿಕೃತವಾಗಿ ಪತ್ರಿಕೆ ಸಂಪಾದಕರು ಪ್ರಕಟಣೆಯಲ್ಲಿ ನೀಡಿದ್ದಾರೆ. 40 ವರ್ಷಗಳ ಕಾಲ ಕನ್ನಡಿಗರ ಮನೆ ಮಾತಾಗಿದ್ದ ಮಂಗಳ ಪ್ರಸಾರ ಸ್ಥಗಿತಗೊಂಡಿದೆ. ಇದರಿಂದ ಅನೇಕ ಓದುಗರ ನಿರಾಸೆಗೊಂಡಿರುವುದು ಸತ್ಯ .

ಕನ್ನಡ ಪತ್ರಿಕಾರಂಗದಲ್ಲಿ ಗುರುತಿಸಿಕೊಂಡಿದ್ದು ಮಾತ್ರವಲ್ಲ ಓದುಗ ವಲಯದಲ್ಲಿ ವಿಶೇಷ ಸ್ಥಾನಪಡೆದುಕೊಂಡಿದ್ದ ಮಂಗಳ ವಾರಪತ್ರಿಕೆ ಈ ವಾರ ಕೊನೆಯ ಸಂಚಿಕೆ ಪ್ರಕಟಿಸಿದೆ.

ಕಳೆದ 40 ವರ್ಷಗಳಲ್ಲಿ ಮಂಗಳ ಮಾಡಿತ್ತು. ಇದೀಗ ಮಂಗಳ ತನ್ನ ಯಾನ ನಿಲ್ಲಿಸಿದೆ.

ಕೊರೋನಾ ನಂತರ ಪತ್ರಿಕೋದ್ಯಮಕ್ಕೆ ಸಾಕಷ್ಟು ಸಂಕಟವಾಗಿತ್ತು. ಡಿಜಿಟಲ್ ಮಾಧ್ಯಮಗಳು ವೇಗ ಪಡೆದುಕೊಂಡವು. ಹಾಗಿದ್ದೂ ಕಳೆದ ಮೂರು ವರ್ಷಗಳ ಕಾಲ ಮಂಗಳವನ್ನು ಮುನ್ನಡೆಸಿದರು. ಆದರೆ ಇದೀಗ ಆರ್ಥಿಕ ಸಮಸ್ಯೆ ಎದುರಾಗಿದೆ. ಹೀಗಾಗಿ ಅನಿವಾರ್ಯವಾಗಿ ಪತ್ರಿಕೆ ಮುದ್ರಣ ಸ್ಥಗಿತಗೊಂಡಿದೆ. ಅನೇಕ ಓದುಗರಿಗೆ ನಿರಾಸೆಯುಂಟಾಗಿದೆ.

ಗ್ರಾಮೀಣ ಭಾಗದಲ್ಲಿ ಟಿವಿ, ಮೊಬೈಲ್ ಇಲ್ಲದೇ ಇರುವ ಸಂದರ್ಭದಲ್ಲಿ ಧಾರವಾಹಿ, ಕತೆ, ಕವನ ಸೇರಿದಂತೆ ಸಮಗ್ರ ಓದಿಗೆ ಮಂಗಳ ಪತ್ರಿಕೆ ಬಹುತೇಕ ಮನೆಗಳಿಗೆ ಬರುತ್ತಿತ್ತು. ಈ ಕತೆಗಳು ಕಾರ್ಯಕ್ರಮಗಳ ಸಂದರ್ಭ ಚರ್ಚೆಯೂ ಆಗುತ್ತಿತ್ತು. ಗ್ರಾಮೀಣ ಭಾಗದ ಓದುಗರಿಗೆ ಅಂದು ಮಂಗಳ ವಾರದ ಖಾಯಂ ಪುಸ್ತಕ. ಅನೇಕ ಓದುಗರನ್ನು ಮಂಗಳ ಸೃಷ್ಟಿ ಮಾಡಿತ್ತು. ಅಷ್ಟಲ್ಲದೆ ನೂರಾರು ಲೇಖಕರಿಗೆ ತಮ್ಮ ಕಥೆ, ಕವನ, ಲೇಖನ, ಪ್ರಬಂಧ ಪ್ರಕಟಿಸಲು ಒಂದೊಳ್ಳೆ ವೇದಿಕೆಯೂ ಆಗಿತ್ತು.

Related Articles

Latest Articles