ಮಂಡ್ಯ: ಹೆಂಡತಿ, ಇಬ್ಬರು ಮಕ್ಕಳಿಗೆ ಕುಡಿಯೋ ನೀರಿನಲ್ಲಿ ವಿಷ ಹಾಕಿ ಕೊಂದಿರುವ ಘಟನೆ ನಾಗಮಂಗಲದಲ್ಲಿ ನಡೆದಿದೆ. ನರಸಿಂಹ ಎಂಬ ವ್ಯಕ್ತಿ ಇಂದು ಮಧ್ಯಾಹ್ನ ಕುಡಿಯುವ ನೀರಿಗೆ ಕ್ರಿಮಿನಾಶಕ ಹಾಕಿದ್ದ. ಹೆಂಡತಿ, ಮಕ್ಕಳಿಗೆ ನೀರನ್ನು ಕುಡಿಸಿರುವ ಪಾಪಿ ನಂತರ ತಾನು ಅದೇ ನೀರು ಕುಡಿದಿದ್ದಾನೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಹೆಂಡತಿ, ಮಕ್ಕಳಿಗೆ ನರಸಿಂಹ ವಿಷ ಹಾಕಿ ಕೊಂದಿದ್ದಾನೆ ಎನ್ನಲಾಗಿದೆ. ಕ್ರಿಮಿನಾಶಕ ಬೆರೆಸಿದ್ದ ನೀರು ಕುಡಿದ ಕೆಲವೊತ್ತಿನಲ್ಲೇ ಮನೆಯಲ್ಲಿದ್ದ ನಾಲ್ವರು ಅಸ್ವಸ್ಥರಾಗಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಮಕ್ಕಳು ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಹೋದ ಬಳಿಕ ಕೀರ್ತನಾ ಎಂಬ ಮಹಿಳೆ ಪ್ರಾಣ ಬಿಟ್ಟಿದ್ದಾರೆ. ಸದ್ಯ ನರಸಿಂಹಗೆ ನಾಗಮಂಗಲ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನರಸಿಂಹ ಹಾಗೂ ಕೀರ್ತನಾ ಐದು ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ಬಳಿಕ ಇಬ್ಬರು ದಂಪತಿಗಳಿಗೆ ಒಂದು ಗಂಡು, ಒಂದು ಹೆಣ್ಣು ಮಗು ಆಗಿತ್ತು. ಕಟ್ಟಿಂಗ್ ಶಾಪ್ ಇಟ್ಟುಕೊಂಡಿದ್ದ ನರಸಿಂಹ ಹಾಗೂ ಕೀರ್ತನಾ ನಡುವೆ ಸದಾ ಜಗಳ ಆಗುತ್ತಿತ್ತು. ನರಸಿಂಹ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎಂದು ಮನೆಯಲ್ಲಿ ಪದೇ ಪದೇ ಜಗಳ ನಡೆಯುತ್ತಿತ್ತು.
ನಾಲಮಂಗಲ ತಾಲೂಕು ಆಸ್ಪತ್ರೆಯಲ್ಲಿ ನರಸಿಂಹಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೀರ್ತನಾ (23), ಜಯಸಿಂಹ (4), ರಿಷಿಕಾ (1.5) ಮೃತ ದುರ್ದೈವಿಗಳು.
With input from newfirstkannada