Tuesday, March 18, 2025

ಅಕ್ರಮ ಮದ್ಯ ಮಾರಾಟ ಪ್ರಶ್ನಿಸಿದ್ದೇ ಮುಳುವಾಯಿತು.! ವಿದ್ಯುತ್ ಶಾಕ್ ಕೊಟ್ಟು ಹತ್ಯೆ

ಅಬಕಾರಿ ಸಚಿವ‌ ಆರ್. ಬಿಮ್ಮಾಪುರ ತವರಲ್ಲಿ ಅಕ್ರಮ ಮದ್ಯ ಮಾರಾಟ ಪ್ರಶ್ನಿಸಿದಕ್ಕೆ ಭೀಕರವಾಗಿ ಹತ್ಯೆ ಮಾಡಲಾಗಿದೆ. ಐವರಿಂದ ಓರ್ವ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವೆಂಕರೆಡ್ಡಿ ಶೇಷಪ್ಪನವರ(40)ಗೆ ಕಟ್ಟಿಗೆಯಿಂದ ಹಲ್ಲೆ ನಡೆಸಿ ಕರೆಂಟ್ ಶಾಕ್ ನೀಡಲಾಗಿದೆ.

ಸದ್ಯ ಈ ಕೊಲೆ ಕೇಸ್​ನಲ್ಲಿ ಐವರು ಆರೋಪಿಗಳನ್ನು ಕೆರೂರು ಪೊಲೀಸರು ಬಂಧಿಸಿದ್ದಾರೆ. ಹನುಮಂತ ನೀಲರ್, ಪತ್ನಿ ಶೈಲಾ ನೀಲರ್, ಪರ್ವತಗೌಡ ಮುದಿಗೌಡ್ರ ಪುಟ್ಟಪ್ಪ ಮುದಿಗೌಡ್ರ, ಸಿದ್ದಪ್ಪ ನೀಲಗೌಡ್ರ ಬಂಧಿತರು.

ಬಂಧಿತ ಆರೋಪಿ ಹನುಮಂತ ನೀಲರ್ ಮನೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು. ಮದ್ಯ ಸೇವಿಸಿ ವೆಂಕರೆಡ್ಡಿ ಮನೆ ಮುಂದೆ ಪ್ಯಾಕೆಟ್ ಬಿಸಾಡಿ ಹೋಗುತ್ತಿದ್ದರು. ಜೊತೆಗೆ ಕುಡಿದ ಅಮಲಿನಲ್ಲಿ ಕೆಲವರು ವೆಂಕರೆಡ್ಡಿ ಮನೆ ಮುಂದೆ ಜಗಳವಾಡುತ್ತಿದ್ದರು. ಹೀಗಾಗಿ ನಮ್ಮ ಮನೆ ಬಳಿ ಮದ್ಯ ಮಾರಬೇಡಿ ಎಂದು ವೆಂಕರೆಡ್ಡಿ ಹೇಳಿದ್ದರು.

ಈ ವಿಚಾರವಾಗಿ ಡಿ.21ರಂದು ವೆಂಕರೆಡ್ಡಿ ಮೇಲೆ ಐವರ ಗ್ಯಾಂಗ್ ಹಲ್ಲೆ ನಡೆಸಿ ಕರೆಂಟ್ ಶಾಕ್ ನೀಡಿದೆ. ಗಾಯಾಳು ವೆಂಕರೆಡ್ಡಿಯನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಿದ್ದರು, ಚಿಕಿತ್ಸೆ ಫಲಿಸದೆ ವೆಂಕರೆಡ್ಡಿ ಸಾವನ್ನಪ್ಪಿದ್ದಾರೆ.

Related Articles

Latest Articles