ಪುರುಷನೊಬ್ಬ ಉದ್ಯೋಗ ಇಲ್ಲ ಎಂಬ ಕಾರಣಕ್ಕೆ ಮಂಗಳಮುಖಿಯಂತೆ ವೇಷ ಧರಿಸಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು, ಅಸಲಿ ಮಂಗಳಮುಖಿಯಿಂದ ಧರ್ಮದೇಟು ತಿಂದ ಘಟನೆ ವರದಿಯಾಗಿದೆ,
ಪುರುಷನೊಬ್ಬ ಮಂಗಳಮುಖಿಯ ವೇಷ ತೊಟ್ಟು ಹಣ ಸಂಪಾದಿಸುವ ಸುಲಭ ಮಾರ್ಗಕ್ಕೆ ಮುಂದಾಗಿ, ನoತರ ತನ್ನ ನಕಲಿ ವೇಷ ಬಟಾ ಬಯಲಾಗುತ್ತಲೇ, ಅಳುತ್ತಾ ಪೆಚ್ಚು ಮೋರೆ ಮಾಡಿಕೊಂಡು ತಪ್ಪೊಪ್ಪಿಕೊಂಡ ಘಟನೆ ಅಂಕೋಲಾದಲ್ಲಿ ನಡೆದಿದೆ.
ಮಂಗಳಮುಖಿಯಂತೆ ಭಿಕ್ಷಾಟನೆ
ಅದೆಲ್ಲಿಂದಲೋ ಬಂದಿದ್ದ ಸೋಮಾರಿ ಪುರುಷನೊಬ್ಬ, ತನ್ನ ಮೀಸೆ ಮತ್ತು ಗಡ್ಡ ನೀಟಾಗಿ ಬೋಳಿಸಿ, ಮೂಗಿಗೆ ಮುಗುತಿ ಹಾಕಿಕೊಂಡು,ತಲೆ ಮತ್ತು ಮುಖಕ್ಕೆ ವೇಲ್ ಸುತ್ತಿಕೊಂಡು, ಮಂಗಳಮುಖಿಯಂತೆ ಬಟ್ಟೆ ಧರಿಸಿ, ಮಂಗಳಮುಖಿಯರoತೆ ಹಾವಭಾವ ಮಾಡುತ್ತಾ, ಅಂಗಡಿಕಾರರು ಮತ್ತಿತರರ ಬಳಿ ಹಣ ಕೇಳಿ ಪಡೆದು ಮುಂದೆ ಮುಂದೆ ಹೊರಟಿದ್ದ.
ಅಂಕೋಲಾ ಪಟ್ಟಣದ ಕೆ.ಸಿ ರಸ್ತೆ ಅಂಚಿನ ಅಂಗಡಿ ಒಂದರ ಬಳಿ ನಕಲಿ ಮಂಗಳಮುಖಿ ಬರುತ್ತಿದ್ದಂತೆ ಗೆಳಯರಿಬ್ಬರು ಆತನ ಹಾವಭಾವದಿಂದ ಅನುಮಾನಗೊಂಡಿದ್ದಾರೆ. ಈ ವೇಳೆಗೆ ಮಂಗಳ ಮುಖಿಯರ ಗುಂಪಿನಲ್ಲಿರುವ ಸದಸ್ಯ ಆ ಸ್ಥಳಕ್ಕೆ ಬಂದಾಗ, ಎಂದಿನ ಚಿರಪಚಿತ ಮುಖ ಕಂಡು ಆತ್ಮೀಯತೆಯಿಂದಲೇ ಮಾತನಾಡಿಸಿ, ನಿಮ್ಮವರಾರಾದರೂ ಹೊಸಬರು ಬಂದಿದ್ದಾರೆಯೇ ಎಂದಾಗ ಅಸಲಿ ಮಂಗಳಮುಖಿಯಿoದ, ಇಲ್ಲ ಎಂಬ ಉತ್ತರ ದೊರೆತಿದೆ.
ಹಿಂಬಾಲಿಸಿ ಹೋದಾಗ ಅಸಲಿ ಸತ್ಯ ಬಯಲು
ಹಾಗಾದರೆ ಸ್ವಲ್ಪ ಮೊದಲು ಬಂದು ಹೋದವರಾರು? ಅವರ ಮೇಲೆ ಏಕೋ ಅನುಮಾನ ಇದೆ ಎನ್ನುವ ಮಾತುಗಳನ್ನು ಗೆಳೆಯರಿಬ್ಬರು ವ್ಯಕ್ತಪಡಿಸಿದಾಗ, ಬನ್ನಿ ನೋಡಿಯೇ ಬಿಡೋಣ ಎಂದು ಮಂಗಳಮುಖಿ ಹೇಳಿದ್ದಾಳೆ. ಕೂಡಲೇ ಎಲ್ಲರೂ ಸೇರಿ ಅನುಮಾನಗೊಂಡ ವ್ಯಕ್ತಿಯ ಬೆನ್ನ ಹಿಂದೆ ಬಿದ್ದಿದ್ದಾರೆ. ಆಗ ಆತನೂ ತನ್ನ ಹಿಂದೆ ಬರುತ್ತಿರುವವರು ತನ್ನನ್ನು ಕರೆದರು, ಕೇಳದಂತೆ ನಟಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಇದರಿಂದ ಅವನ ಬೆನ್ನಟ್ಟಿ ಬಂದವರ ಅನುಮಾನ ಹೆಚ್ಚಾಗಿ, ಅವನನ್ನು ತಡೆದು ನಿಲ್ಲಿಸಿ ವಿಚಾರಿಸಿದ್ದಾರೆ.
ಅಸಲಿ ಮಂಗಳಮುಖಿಯಿಂದ ಧರ್ಮದೇಟು
ಸಿಕ್ಕಿಬೀಳುತ್ತಿದ್ದಂತೆ ಆತ ನನ್ನ ಅಸಲಿ ವೇಷ ಮರೆಮಾಚಲು ಯತ್ನಿಸಿದ್ದಾನೆ. ಆತನ ಬಳಿ ಇದ್ದ ಚೀಲದಲ್ಲಿ ಗಂಡಸರು ತೋಡುವ ಬಟೈಯೂ ಇದ್ದು, ಕೊಪಗೊಂಡ ಅಸಲಿ ಮಂಗಳಮುಖಿ, ನಕಲಿ ವೇಷ ಧರಿಸಿದಾತನಿಗೆ, ಒಂದು ಧರ್ಮದೇಟು ನೀಡಿ, ಕೂಡಲೇ ಆತ ಧರಿಸಿರುವ ಹೆಣ್ಣು ಮಕ್ಕಳ ವಸ್ತ್ರ ತೆಗೆಯುವಂತೆ ಅಸಲಿ ಮಂಗಳಮುಖಿ ತಾಕೀತು ಮಾಡಿದ್ದಾಳೆ.ಆತ ಮೈ ಮೇಲ್ಭಾಗದ ಬಟ್ಟೆ ತೆಗೆಯುತ್ತಿದ್ದಂತೆ, ತನ್ನ ಎದೆ ಭಾಗಕ್ಕೆ ಮಹಿಳೆಯರು ಧರಿಸುವ ಒಳ ಉಡುಪನ್ನು ಧರಿಸಿರುವುದು ಕಂಡು ಅಲ್ಲಿದ್ದ ಹಲವರು ಕ್ಷಣ ಕಾಲ ಹೌಹಾರಿದ್ದಾರೆ.
ತನ್ನ ಅಸಲಿಯತ್ತು ಬಟಾ ಬಯಲಾಗುತ್ತಿದ್ದಂತೆ ಅಳುತ್ತಾ, ತನ್ನಿಂದ ತಪ್ಪಾಗಿದೆ. ಉದ್ಯೋಗವಿಲ್ಲದ್ದರಿಂದ ನಕಲಿ ವೇಷ ತೊಟ್ಟು ಹಣ ಮಾಡಲು ಮುಂದಾದೆ ಎಂದು ತಪ್ಪು ಒಪ್ಪಿಕೊಂಡಿದ್ದಾನೆ. ಮತ್ತೆ ಹೀಗೆ ಮಾಡುವುದಿಲ್ಲ ಎನ್ನುತ್ತಾ ಗಂಡುಡುಗೆ ತೊಟ್ಟಿದ್ದಾನೆ. ಇಂತಹ ದಂಧೆಗಳು ರಾಜ್ಯದಲ್ಲಿ ಈ ಹಿಂದೆಯೂ ನಡೆದಿದ್ದವು. ಮಂಗಳಮುಖಿಯಂತೆ ವೇಷ ಧರಿಸಿ ಹಣ ಕಬಳಿಸುವ ಗ್ಯಾಂಗ್ ಬಗ್ಗೆ ಸಾಕಷ್ಟು ವರದಿಯಾಗಿತ್ತು.