ಕೇರಳ: ಆಟವಾಡುತ್ತಿದ್ದಾಗ ಬಾಲಕಿಯ ತಲೆಯ ಮೇಲೆ ಹಲಸಿನಹಣ್ಣಯ ಬಿದ್ದು ದುರಂತ ಸಾವನ್ನಪ್ಪಿದ್ದಾಳೆ. ಮಲಪ್ಪುರಂನ ಕೊಟ್ಟಕ್ಕಲಿ ಎಂಬಲ್ಲಿ ಈ ಘಟನೆ ನಡೆದಿದೆ.
ಮೇ. 3ರಂದು ಬೆಳಿಗ್ಗೆ 9:30 ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಮೃತಳನ್ನು ಚಂಕುವೆಟ್ಟಿ ಮೂಲದ ಎಂಟು ವರ್ಷದ ಆಯೇಷಾ ತಸ್ನಿ ಎಂದು ಗುರುತಿಸಲಾಗಿದೆ.
ತಸ್ನಿ ತನ್ನ ಮನೆಯ ಮುಂದೆ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಅವಳ ತಲೆಯ ಮೇಲೆ ಒಂದು ದೊಡ್ಡ ಹಲಸಿನ ಹಣ್ಣು ಬಿದ್ದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಮಗುವನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಜೀವ ಉಳಿಸಲಾಗಲಿಲ್ಲ.