Tuesday, January 21, 2025

ಮಡಿಕೇರಿ: 3 ಕೋಟಿ ರೂ.ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ – 7 ಪೆಡ್ಲರ್​ಗಳು ಅರೆಸ್ಟ್

ಕೊಡಗು ಜಿಲ್ಲಾ‌ ಪೊಲೀಸರು ಡ್ರಗ್ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಥೈಲ್ಯಾಂಡ್​ನಿಂದ ಕೊಡಗಿಗೆ ತಂದಿದ್ದ 3 ರೂ. ಮೌಲ್ಯದ ಹೈಡ್ರೋ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.

ಕೇರಳ ಹಾಗೂ ಕೊಡಗು ಮೂಲದ‌ ಮೆಹರೂಫ್, ರವೂಫ್, ನಾಸಿರುದ್ದೀನ್,, ವಾಜೀದ್, ಯಾಹಿಯಾ, ಅಕಾನಾಸ್ ಹಾಗೂ ರಿಯಾಜ್ ಸೇರಿ ಏಳು ಮಂದಿ ಪೆಡ್ಲರ್​ಗಳನ್ನು ಬಂಧಿಸಲಾಗಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ‌ದ ಮೂಲಕ ತರಲಾಗಿದ್ದ ಹೈಡ್ರೋ ಗಾಂಜಾ ಇದಾಗಿದ್ದು, ಮಡಿಕೇರಿ ನಗರದ ವಿರಾಜಪೇಟೆ ರಸ್ತೆಯ ಬಳಿ ಆರೋಪಿಗಳನ್ನು ಹೆಡಮುರಿ ಕಟ್ಟಲಾಗಿದೆ. ಈ ಕುರಿತು ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ.

Related Articles

Latest Articles