Saturday, January 25, 2025

ಮನೆಯವರ ವಿರೋಧವನ್ನೂ ಲೆಕ್ಕಿಸದೆ ತೃತೀಯ ಲಿಂಗಿಯನ್ನು ಪ್ರೀತಿಸಿ ವರಿಸಿದ ಯುವಕ

ತೃತಿಯ ಲಿಂಗಿಯ ಪ್ರೀತಿಗೆ ಬಿದ್ದು ಯುವಕನೋರ್ವ ಆಕೆಯನ್ನು ವರಿಸಿದ ಘಟನೆ ಆಂಧ್ರಪ್ರದೇಶದ ಖಮ್ಮಂ ನಡೆದಿದೆ. ಆದರೆ ಈ ಇಬ್ಬರಿಗೆ ಯುವಕನ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದಾರೆ.

ಗಣೇಶ್​ ಎಂಬ ಯುವಕ ಆಂಧ್ರಪ್ರದೇಶದ ನಂದಿಪಟ್ಟಣದ ತೃತೀಯ ಲಿಂಗಿ ದೀಪು ಎಂಬಾಕೆಯ ಪ್ರೀತಿಗೆ ಮನಸೋತು ಆಕೆಯನ್ನು ವಿವಾಹವಾಗಿದ್ದಾನೆ.

ಗಣೇಶ್​ ಒಂದು ವರ್ಷ ಹಿಂದೆ ದೀಪುವನ್ನು ಭೇಟಿ ಮಾಡಿದ್ದನು. ಭೇಟಿ ಪ್ರೀತಿಗೆ ತಿರುಗಿ ಸದ್ಯ ಈ ಜೋಡಿ ವಿವಾಹವಾಗಿದ್ದಾರೆ.

ಗಣೇಶ್​​ ಮತ್ತು ದೀಪು ವಿವಾಹದ ಘಟನೆಯನ್ನು ಪತ್ರಕರ್ತರೊಬ್ಬರು ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಚಾರ ಬೆಳಕಿಗೆ ಬಂದಂತೆ ಇಬ್ಬರ ಫೋಟೋ, ವಿಡಿಯೋ ವೈರಲ್​ ಆಗಿದೆ. ಬಳಿಕ ಗಣೇಶ್​ ಮತ್ತು ದೀಪು ಪೊಲೀಸರ ಜೊತೆ ರಕ್ಷಣೆ ಕೇಳಿದ್ದಾರೆ. ಕುಟುಂಬದವರು ಇಬ್ಬರ ವಿವಾಹವನ್ನು ವಿರೋಧಿಸಿದ್ದಾರೆ ಎಂದು ಹೇಳಿದ್ದಾರೆ.

Related Articles

Latest Articles