ಕುಡಿದ ಅಮಲಿನಲ್ಲಿ ಸಿಂಹದ ಜೊತೆ ಸರಸ ಆಡಲು ಹೋಗಿ ವ್ಯಕ್ತಿಯೊಬ್ಬ ಬಲಿಯಾದ ಆಘಾತಕಾರಿ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ. ರಾಜಸ್ಥಾನ ಮೂಲದ ಪ್ರಹ್ಲಾದ್ ಗುಜ್ಜರ್ ಸಾವಿಗೀಡಾದ ವ್ಯಕ್ತಿ.
ತಿರುಪತಿಯಲ್ಲಿರೋ ಶ್ರೀ ವೆಂಕಟೇಶ್ವರ ಝೂಲಾಜಿಕಲ್ ಪಾರ್ಕ್‌ಗೆ ರಾಜಸ್ಥಾನ ಮೂಲದ ಪ್ರಹ್ಲಾದ್ ಗುಜ್ಜರ್ ಭೇಟಿ ನೀಡಿದ್ದ. ಈ ವೇಳೆ ಸಿಬ್ಬಂದಿ ಎಚ್ಚರಿಕೆಯನ್ನೂ ಮೀರಿ ಸಿಂಹ ಇದ್ದ ಆವರಣಕ್ಕೆ ಹೋಗಿ ಸೆಲ್ಫಿ ತೆಗೆಯಲು ಮುಂದಾಗಿದ್ದಾನೆ. ವ್ಯಕ್ತಿಯನ್ನು ನೋಡಿದ ಸಿಂಹ ಆತನ ಮೇಲೆ ತೀವ್ರವಾಗಿ ದಾಳಿ ಮಾಡಿದೆ.
ಸಿಂಹದ ದಾಳಿ ತಪ್ಪಿಸಿಕೊಳ್ಳಲು ಪ್ರಹ್ಲಾದ್ ಮರ ಕೂಡ ಏರಿದ್ದನು. ಆದರೆ ಸಿಂಹ ಆತನನ್ನು ಕೊಂದು ತಿಂದು ಹಾಕಿದೆ. ಸದ್ಯ ನರಭಕ್ಷಕ ಸಿಂಹವನ್ನು ಡೊಂಗಲ್ಪುರ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ.