Monday, December 9, 2024

32 ವರ್ಷಗಳಿಂದ ಸಮುದ್ರದಲ್ಲಿ ತೇಲುತ್ತಿದ್ದ ಬಾಟಲಿ..! ಪತ್ರದಲ್ಲಿದ್ದ ಸಂದೇಶ ಓದಿ ಭಾವುಕ

ಇತ್ತೀಚೆಗೆ ನ್ಯೂಯಾರ್ಕ್‌ನ ಶಿನ್ನೆಕಾಕ್ ಕೊಲ್ಲಿಯಲ್ಲಿ ವಿಶೇಷ ಘಟನೆಯೊಂದು ನಡೆದಿದೆ. ಅದು ಗಾಜಿನ ಬಾಟಲಿಗೆ ಸಂಬಂಧಿಸಿದ್ದು‌‌.. ಅದರಲ್ಲೇನು ವಿಶೇಷ ಎಂದು ಯೋಚಿಸುತ್ತೀರಬಹುದು. ಅದು ನೀವಂದುಕೊಂಡಂತೆ ಯಾವುದೇ ಸಾಮಾನ್ಯ ಬಾಟಲಿಯಲ್ಲ. ಕಳೆದ 32 ವರ್ಷಗಳಿಂದ ಸಮುದ್ರದಲ್ಲಿ ತೇಲುತ್ತಿದ್ದ ಬಾಟಲಿ ಈಗ ಗಮ್ಯ ಸ್ಥಾನ ತಲುಪಿದೆ.

ಬಾಟಲಿಯೊಳಗೆ ಒಂದು ಪತ್ರವೂ ಇತ್ತು. ಪತ್ರವನ್ನು ಬರೆದ ನಂತರ, ಯಾರೋ ಅದನ್ನು ಬಾಟಲಿಯೊಳಗೆ ಮುಚ್ಚಿ ಅಟ್ಲಾಂಟಿಕ್ ಸಾಗರಕ್ಕೆ ಎಸೆದಿದ್ದಾರೆ.

ಈ ಪತ್ರವನ್ನು 1992 ರಲ್ಲಿ ನ್ಯೂಯಾರ್ಕ್‌ನ ಮ್ಯಾಟಿಟಕ್ ಹೈಸ್ಕೂಲ್‌ನ 9 ನೇ ತರಗತಿಯಲ್ಲಿ ಓದುತ್ತಿರುವ ಶಾನ್ ಮತ್ತು ಬೆನ್ನಿ ಎಂಬ ವಿದ್ಯಾರ್ಥಿಗಳು ಬರೆದಿದ್ದಾರೆ. ಆ ನಂತರ ವಿದ್ಯಾರ್ಥಿಗಳು ಈ ಬಾಟಲಿಯನ್ನು ಲಾಂಗ್ ಐಲ್ಯಾಂಡ್ ಬಳಿಯ ಅಟ್ಲಾಂಟಿಕ್ ಸಾಗರಕ್ಕೆ ಎಸೆದಿದ್ದರು. ಪತ್ರದಲ್ಲಿ ವಿದ್ಯಾರ್ಥಿಗಳು ಬಾಟಲಿಯಲ್ಲಿ ನೀಡಿದ ವಿಳಾಸಕ್ಕೆ ಹಿಂತಿರುಗಿಸಬೇಕು ಎಂದು ಬರೆದಿದ್ದರು. ಅದರಲ್ಲಿ ಅವರು ಶಾಲೆಯ ವಿಳಾಸವನ್ನು ಬರೆದಿದ್ದರು.

ವರದಿಗಳ ಪ್ರಕಾರ, ಆಡಮ್ ಟ್ರಾವಿಸ್ ಎಂಬ ವ್ಯಕ್ತಿ ಈ ಬಾಟಲಿಯೊಳಗಿನ ಪತ್ರವನ್ನು ಶಿನ್ನೆಕಾಕ್ ಕೊಲ್ಲಿಯಲ್ಲಿ ತೆಗೆದುಕೊಂಡಿದ್ದಾರೆ. ನಂತರ, ಅವರು ಬಾಟಲಿ ಮತ್ತು ಅದರಲ್ಲಿರುವ ಪತ್ರವನ್ನು ಮ್ಯಾಟಿಟಕ್ ಹೈಸ್ಕೂಲ್ ಅಲುಮ್ನಿ ಎಂಬ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಪತ್ರ ಬರೆದ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಬೆನ್ನಿ ಡೊರೊಸ್ಕಿ ಅವರು ಪೋಸ್ಟ್ ನಲ್ಲಿ ಭೂ ವಿಜ್ಞಾನ ಶಿಕ್ಷಕ ರಿಚರ್ಡ್ ಇ ಬ್ರೂಕ್ಸ್ ಅವರನ್ನು ಇದರಲ್ಲಿ ನೆನಪಿಸಿಕೊಂಡಿದ್ದಾರೆ.

ಬೆನ್ನಿ, ‘ ಶ್ರೀ ಬ್ರೂಕ್ಸ್ ಅದ್ಭುತ ಶಿಕ್ಷಕರಾಗಿದ್ದರು. ನಾನು ಈ ಬಾಟಲಿಯನ್ನು ತೆಗೆದುಕೊಂಡ ವ್ಯಕ್ತಿಯನ್ನು ಭೇಟಿಯಾಗಲು ಬಯಸುತ್ತೇನೆ’ ಎಂದು ಬರೆದಿದ್ದನು. ಬೆನ್ನಿಯ ಆಸೆಯಂತೆ ಆಡಮ್ ಟ್ರಾವಿಸ್ ಅವರ ಕಾಮೆಂಟ್‌ಗೆ ಉತ್ತರಿಸಿದ್ದಾರೆ. ಅವರು ಬಾತುಕೋಳಿ ಬೇಟೆಯ ಉಪಕರಣವನ್ನು ಸ್ವಚ್ಛಗೊಳಿಸುತ್ತಿರುವಾಗ, ಭಗ್ನಾವಶೇಷಗಳ ರಾಶಿಯ ಮೇಲೆ ಈ ಬಾಟಲಿಯ ಪತ್ರವನ್ನು ಗಮನಿಸಿದೆ ಎಂದು ಅವರು ಬೆನ್ನಿಗೆ ಹೇಳಿದ್ದಾರೆ.

ಅಷ್ಟೇ ಅಲ್ಲ, ಶಿಕ್ಷಕ ಬ್ರೂಕ್ಸ್ ಅವರ ಮಗ ಜಾನ್ ಅವರು ಈ ಪೋಸ್ಟ್ ಅನ್ನು ನೋಡಿ ತುಂಬಾ ಭಾವುಕರಾಗಿದ್ದಾರೆ. ನಂತರ, ಜಾನ್, ಆಡಮ್​​​​ಗೆ ಧನ್ಯವಾದ ಹೇಳಿದ್ದಾನೆ. ಕೊನೆಗೆ ತಮ್ಮ ತಂದೆ ಈ ಜಗತ್ತಿನಲ್ಲಿಲ್ಲ, ಅವರು ಕಳೆದ ವರ್ಷ ಆಲ್ಝೈಮರ್ನಿಂದ ನಿಧನರಾದರು ಎಂದು ಹೇಳಿದ್ದಾರೆ.

Related Articles

Latest Articles