Monday, December 9, 2024

ಚಿರತೆ ದಾಳಿ; ಸಮಯಪ್ರಜ್ಞೆ ಮೆರೆದು ಮಗಳ ಪ್ರಾಣ ಉಳಿಸಿದ ತಂದೆ

ತುಮಕೂರಿನಲ್ಲಿ ಕೂಡ ಚಿರತೆ ಕಾಣಿಸಿಕೊಂಡಿದೆ. ಈ ವೇಳೆ ಮಗುವಿನ ಮೇಲೆ ದಾಳಿ ಮಾಡಿ ಹೊತ್ತೊಯಲು ಯತ್ನಿಸಿದ ಚಿರತೆಯನ್ನು ಬೆದರಿಸಿ ತಂದೆಯೊಬ್ಬರು ಮಗುವನ್ನು ಉಳಿಸಿಕೊಂಡ ಘಟನೆ ಚಿಕ್ಕಬೆಳ್ಳಾವಿ ಗ್ರಾಮದಲ್ಲಿ ನಡೆದಿದೆ.

7 ವರ್ಷದ ಬಾಲಕಿ ಲೇಖನ ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಚಿರತೆಯೊಂದು ಎಗರಿ ಹೊತ್ತೊಯ್ಯಲು ಮುಂದಾಗಿದೆ. ಅದೇ ವೇಳೆ ಸಮೀಪದಲ್ಲೇ ಇದ್ದ ತಂದೆ ರಾಕೇಶ್‌ ಜೋರಾಗಿ ಕೂಗಿಕೊಂಡು ದೊಣ್ಣೆಯೊಂದಿಗೆ ಚಿರತೆಗೆ ಬೆದರಿಸಿದ್ದಾರೆ. ಕೂಡಲೇ ಚಿರತೆ, ಮಗುವನ್ನು ಬಿಟ್ಟು ಓಡಿ ಹೋಗಿದೆ.

ಮಗುವನ್ನು ಬಂದಿದ್ದ ಶಿರತೆಯ ದಾಳಿಗೆ ಏಳು ವರ್ಷದ ಮಗು ಲೇಖನಾಗೆ ಕೈ ಮತ್ತು ಮೈಯಿಗೆ ಚಿರತೆ ಪರಚಿದ ಗಾಯಗಳಾಗಿದ್ದು, ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಚಿರತೆ ದಾಳಿಯಿಂದ ಬಾಲಕಿ ಪಾರಾಗಿದ್ದಾಳೆ.

Related Articles

Latest Articles