ಝೀ ಕನ್ನಡ. ಸದಾ ಟಿಆರ್‌ಪಿಯಲ್ಲಿ ಮುಂದಿರುವ ಚಾನೆಲ್ ಝೀ ಕನ್ನಡದಲ್ಲಿ ಪ್ರಸಾರ ಆಗುವ ಧಾರವಾಹಿಗಳು ಕನ್ನಡ ಕಿರುತೆರೆಯಲ್ಲೇ ಅತ್ಯಧಿಕ ವೀಕ್ಷಕರನ್ನು ಸೆಳೆದಿಟ್ಟುಕೊಂಡಿದೆ.
ಝೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಧಾರವಾಹಿಗಳೇ ನಡುವೆಯೇ ಪೈಪೋಟಿಯಿದೆ. ವಾರ ವಾರ ಟಿಆರ್‌ಪಿ ರೇಟಿಂಗ್‌ನಲ್ಲಿ ಪುಟ್ಟಕ್ಕನ ಮಕ್ಕಳು ಟಾಪ್‌ನಲ್ಲಿದ್ದರೆ, ಅಮೃತಧಾರೆ, ಲಕ್ಷ್ಮೀ ನಿವಾಸ, ಸತ್ಯ ಮೋಡಿ ಮಾಡುತ್ತಿದೆ.
ವಿಭಿನ್ನ ಕಥಾಹಂದರವಿರುವ ಲಕ್ಷ್ಮೀ ನಿವಾಸ ಸಿರೀಯಲ್‌ನಲ್ಲಿ ಬರುವ ಪ್ಲಾಟ್‌ಗಳು ಮಿಕ್ಕ ಧಾರವಾಹಿಗಳಿಗಿಂತ ಭಿನ್ನ. ಹಲವು ಸನ್ನಿವೇಶಗಳನ್ನು ಅರ್ಧ ಗಂಟೆಯಲ್ಲಿ ಭಟ್ಟಿ ಇಳಿಸುವ ನಿರ್ದೇಶಕರ ಜಾಣ್ಮೆ ಮೆಚ್ಚಲೇ ಬೇಕು.
ಒಂದು ಕಡೆಯಲ್ಲಿ ಲಕ್ಷ್ಮೀ ಶ್ರೀನಿವಾಸ ಅವರ ಕುಟುಂಬ, ಮತ್ತೊಂದೆಡೆ ಸಿದ್ದೇಗೌಡ್ರು ಅವರ ಫ್ಯಾಮಿಲಿ, ವೆಂಕಿ ಲವ್ ಸ್ಟೋರಿ, ಜಾಹ್ನವಿಯ ಸೈಕೋ ಗಂಡ ಜಯಂತ್, ಲಕ್ಷ್ಮೀ ನಿವಾಸದ ಇತರ ಸದಸ್ಯರು, ಪುಟ್ಟ ಕಂದಮ್ಮಳ ಫ್ಯಾಮಿಲಿ, ಜಾಹ್ನವಿಯ ಹಳೇ ಲವರ್ ವಿಶ್ವನಾಥ್ ಅವರ ಕುಟುಂಬ, ಹೀಗೆ ಎಲ್ಲವನ್ನೂ ಜಾಣ್ಮೆಯಿಂದ ಉಣಬಡಿಸಲಾಗುತ್ತಿದೆ.
ಭಾವನಾಗೆ ತಾಳಿ ಕಟ್ಟಿದ ಸಿದ್ದೇಗೌಡ್ರು..!
ಭಾವನಾ ಅವರ ಮೇಲೆ ಪ್ರೀತಿಯಲ್ಲಿ ಬಿದ್ದಿರುವ ಸಿದ್ದೇಗೌಡ್ರು, ಭಾವನಾಳಿಗೆ ಅರಿವಿಗೆ ಬಾರದಂತೆ ತಾಳಿ ಕಟ್ಟಿದ್ದಾರೆ. ಇದರಿಂದ ನೊಂದ ಭಾವನಾ ಕೊರಗಿ ಸುಣ್ಣವಾಗುತ್ತಿದ್ದಾಳೆ. ಇದನ್ನು ತಿಳಿದುಕೊಂಡ ಗೌಡ್ರು ಕೂಡ ದುಃಖದಲ್ಲಿದ್ದಾರೆ.
ಮದುವೆ ವಿಡಿಯೋ ವೈರಲ್
ಸಾಕಷ್ಟು ಭಾರೀ ಸಿರೀಯಲ್‌ನ ಪ್ರಸಾರ ಆಗುವವರೆಗೂ ಸಿರೀಯಲ್ ಸೆಟ್‌ನಲ್ಲಿ ಆಗುವ ಬೆಳವಣಿಗೆಗಳು ಯಾವುದೇ ಮಾಧ್ಯಮದಲ್ಲೂ ಪ್ರಸಾರ ಆಗಲ್ಲ. ಆದರೆ youtube ನಲ್ಲಿ ಒಂದು ರೀಲ್ಸ್ ಹರಿದಾಡುತ್ತಿದೆ. ಭಾವನಾ ಹಾಗೂ ಸಿದ್ದೇಗೌಡ ಮದುವೆಯ ವಿಡಿಯೋ ಇದು. ಇಬ್ಬರೂ ಸಹ ನಗುನಗುತ್ತಾ, ಕೊರಳಲ್ಲಿ ಹಾರ, ಮದುಮಕ್ಕಳಂತೆ ಕಂಗೊಳಿಸುತ್ತಿದ್ದಾರೆ. ಈ ವಿಡಿಯೋದಿಂದಲೇ ಈ ಜೋಡಿ ಸೀರಿಯಲ್ ಪ್ರಿಯರಿಗೆ ಖುಷಿ ನೀಡುತ್ತಿದೆ.