Wednesday, July 24, 2024

” ಳ ‘ ಕನ್ನಡ ಕಿರು ಚಿತ್ರಕ್ಕೆ ಪ್ರಶಸ್ತಿಯ ಗರಿ

ಫಿಲ್ಮ್ ಫೆಸ್ಟಿವಲ್ ಜಂಕ್ಷನ್ ಕೋಲ್ಕತಾ ಆಯೋಜಿಸಿದ ಇಂಡಿಯನ್ ಶಾರ್ಟ್ ಸಿನೆಮಾ ಫಿಲ್ಮ್ ಫೆಸ್ಟಿವಲ್ ಸ್ಪರ್ಧೆಯಲ್ಲಿ ‘ “ಳ ‘ ಕನ್ನಡ ಕಿರು ಚಿತ್ರಕ್ಕೆ ಮೂರು ವಿಭಾಗದಲ್ಲಿ ಪ್ರಶಸ್ತಿಗಳು ದೊರಕಿದ್ದು, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಾಯಕ ನಟ, ಅತ್ಯುತ್ತಮ ಛಾಯಾಗ್ರಹಣಕ್ಕೆ ವಿಭಾಗಕ್ಕೆ ಪ್ರಶಸ್ತಿ ದೊರಕಿವೆ.

ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯು ಈ ಕಿರು ಚಿತ್ರದ ನಿರ್ದೇಶಕರಾದ ಚೇತನ್ ಕೆ ವಿಟ್ಲ ರವರಿಗೆ ಲಭಿಸಿದೆ. ಈ ಕಿರುಚಿತ್ರದ ನಾಯಕ ನಟ ಕಾರ್ತಿಕ್ ಕುಮಾರ್ ರವರಿಗೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಹಾಗೂ ಅಚಲ್ ವಿಟ್ಲ ರವರಿಗೆ ಅತ್ಯುತ್ತಮ ಛಾಯಗ್ರಾಹಕ ಪ್ರಶಸ್ತಿ ದೊರಕಿದೆ.

ವಿಟ್ಲದ ಪ್ರತಿಭಾವಂತ ಯುವಕರ ತಂಡದಿಂದ ತಯಾರಾದ ಈ ಕಿರು ಚಿತ್ರ ಒಂದು ವ್ಯಕ್ತಿಯ ನ್ಯೂನತೆ ಹಾಗೂ ಅದರ ಸುತ್ತ ಅವಮಾನಿಸುವ ಜನರ ಮಧ್ಯೆ ಸಾಧನೆಗೈಯುವಂತಹ ಕಥಾ ಹಂದರ ಹೊಂದಿರುವ ಸಾರಾಂಶ ಉಳ್ಳ ಕಿರು ಚಿತ್ರ ಇದಾಗಿದೆ. ಈಗಾಗಲೇ ಕರ್ನಾಟಕದದ್ಯಾಂತ ಎಲ್ಲರ ಮೆಚ್ಚುಗೆ ಪಡೆದಿರುವ ಈ ಕಿರು ಚಿತ್ರ ಬೇರೆ ಬೇರೆ ವಾಹಿನಿಗಳಲ್ಲಿ ಈಗಾಗಲೇ ಪ್ರಸಾರಗೊಂಡು ಹಲವು ಪ್ರಶಸ್ತಿಗಳು ದೊರಕಿವೆ.

ಈ ಕಿರು ಚಿತ್ರಕ್ಕೆ ನಿರ್ದೇಶನ, ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ರಾಗಸ೦ಯೊಜನೆ ಚೇತನ್ ಕೆ ವಿಟ್ಲ ರವರದ್ದಾಗಿದು, ಈ ಕಿರು ಚಿತ್ರದಲ್ಲಿ ಸಹ ನಿರ್ದೇಶನದ ಜೊತೆಗೆ ನಾಯಕ ನಟನಾಗಿ ಕಾರ್ತಿಕ್ ಕುಮಾರ್ ನಟಿಸಿದ್ದು, ನಾಯಕಿಯಾಗಿ ಸುಪ್ರಿಯಾ ಆಚಾರ್ ನಟಿಸಿದ್ದಾರೆ. ಈ ಕಿರು ಚಿತ್ರಕ್ಕೆ ಅಚಲ್ ವಿಟ್ಲ ಛಾಯಗ್ರಹಣವಿದ್ದು , ಬೆಳಕು ಶಶಾಂಕ್ ಕುಂಬ್ರ, ಸಂಗೀತ ಹಾಗೂ ಗಾಯನ ಯಶು ಸ್ನೇಹಗಿರಿ, ಸಂಕಲನ ಬಾತುಕುಲಾಲ್ ರದಾಗಿದ್ದು ಈ ಕಿರು ಚಿತ್ರವನ್ನು ಶಿವಪ್ರಕಾಶ್ ಮಿತ್ತೂರು ರವರು ನಿರ್ಮಿಸಿದ್ದು,
ಮನೋಜ್ ಅರ್ಕ, ಮಹೇಶ್ ವರ್ಮ ವಿಟ್ಲ, ಶ್ರೀಮತಿ ಅನುರಾಧ, ಗಿರೀಶ್ ಕಣಿಯೂರು, ಯುಕ್ತೆಶ್, ಪವನ್, ಅಭಿಲಾಷ್, ಆರ್ಪಿತ್ , ಅಂಕಿತ್ ಮದನ್ ಪೂಜಾರಿ ಮುಂತಾದವರ ತಾರಬಳಗವಿದ್ದು ಈ ಕಿರು ಚಿತ್ರ ಅನ್ನಪೂರ್ಣೇಶ್ವರಿ ಕ್ರಿಯೇಷನ್ ಯುಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸ ಬಹುದಾಗಿದೆ.

Related Articles

Latest Articles