Sunday, November 3, 2024

ಲಿಫ್ಟ್‌ನಲ್ಲಿ ಸಿಲುಕಿ ಕಾರ್ಮಿಕ ಮೃತ್ಯು

ಲಿಫ್ಟ್‌‌ನಲ್ಲಿ ಆದ ತಾಂತ್ರಿಕ ದೋಷದಿoದ ಕಾರ್ಮಿಕನೋರ್ವ ದಾರುಣವಾಗಿ ಅಸುನೀಗಿದ ಘಟನೆ ಕುಮಟಾ ಪಟ್ಟಣದ ಸುಭಾಷ್ ರಸ್ತೆಯ ಜಗದಂಬಾ ಇಲೆಕ್ಟ್ರಿಕಲ್ಸ್ ನಲ್ಲಿ ನಡೆದಿದೆ.

ರಾಜಸ್ಥಾನದ ಜೋದಪುರ್ ನಿವಾಸಿ ಗೋಪಾಲ್ ಸಿಂಗ್ ಮೃತಪಟ್ಟ ವ್ಯಕ್ತಿ. ಈತ ಜಗದಂಬಾ ಇಲೆಕ್ಟ್ರಿಕಲ್ಸ್ ನಲ್ಲಿ ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ.

ಈತ ಗ್ರಾಹಕರಿಗೆ ಬೇಕಾದ ಸಾಮಾಗ್ರಿಗಳನ್ನು ತರಲು ಮೆಟ್ಟಿಲುಗಳ ಮೂಲಕ ಮೇಲಿನ ಮಹಡಿಗೆ ತೆರಳಿದ್ದು, ಬಳಿಕ ಅಲ್ಲಿಂದ ಸಾಮಾಗ್ರಿಗಳನ್ನು ಲಿಪ್ಟ್ ನಲ್ಲಿ ಹಾಕಿಕೊಂಡು ಕೆಳಗಡೆ ಬರುವಾಗ ತಾಂತ್ರಿಕದೋಷದಿoದ ಲಿಪ್ಟ್ ನ ಬಾಗಿಲಲ್ಲಿ ಎದೆ ಸಿಲುಕಿಕೊಂಡಿದೆ ಎನ್ನಲಾಗಿದೆ. ಈ ವೇಳೆ ಹೊರಬರಲಾಗದೆ ಸ್ಥಳದಲ್ಲಿ ಮೃತಪಟ್ಟಿರುದುದಾಗಿ ತಿಳಿದು ಬಂದಿದೆ.

ಘಟನೆ ಸಂಭoದಿಸಿದoತೆ ಇನ್ನೋರ್ವ ಕಾರ್ಮಿಕ ಉದಯ ಮಹಾದೇವ ನಾಯ್ಕ ಎನ್ನುವವರು ಕುಮಟಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Articles

Latest Articles