ಕುಂಬಳೆ: ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಸೆ. 18ರಂದು ರಾತ್ರಿ ಟಿಪ್ಪರ್ ಢಿಕ್ಕಿ ಹೊಡೆದು ಕುಂಬಳೆ ಮೂಲದ ಯುವಕ ದಾರುಣವಾಗಿ ಅಸುನೀಗಿದ ಘಟನೆ ವರದಿಯಾಗಿದೆ. ಎಂ.ಬಿ.ಬಿ.ಎಸ್. ವಿದ್ಯಾರ್ಥಿ, ಕಟ್ಟತ್ತಡ್ಕ ಎ.ಕೆ.ಜಿ. ನಗರದ ಮೊಗ್ರಾಲ್ ಕೊಪ್ಪಳ ನಿವಾಸಿ ಅಹಮ್ಮದ್ ಅವರ ಪುತ್ರ ಎಂ.ಕೆ. ಮೊಹಮ್ಮದ್ ರಾಶಿದ್ (21) ಸಾವಿಗೀಡಾದರು.
ಎಂ.ಬಿ.ಬಿ.ಎಸ್. ದ್ವಿತೀಯ ವರ್ಷವಿದ್ಯಾರ್ಥಿಯಾಗಿರುವ ರಾಶಿದ್ ಬುಧವಾರ ರಾತ್ರಿ ಬೈಕ್ ರಸ್ತೆ ಬದಿ ನಿಲ್ಲಿಸಿ ಮತ್ತೊಂದು ಬದಿಯಲ್ಲಿರುವ ಹೊಟೇಲ್‌ನಿಂದ ಆಹಾರ ಖರೀದಿಸಿ ರಸ್ತೆ ದಾಟುತ್ತಿದ್ದಾಗ ಟಿಪ್ಪರ್ ಢಿಕ್ಕಿ ಹೊಡೆದಿದೆ. ರಜೆಯಲ್ಲಿ ಊರಿಗೆ ಬಂದಿದ್ದ ರಾಶಿದ್ ಒಂದು ವಾರದ ಕೊಯಮುತ್ತೂರಿಗೆ ಮರಳಿದ್ದರು. ವಿಷಯ ತಿಳಿದು ವಿದೇಶದಲ್ಲಿರುವ ತಂದೆ ಅಹಮ್ಮದ್ ಊರಿಗೆ ಬಂದಿದ್ದಾರೆ.
ರಾಶಿದ್ ಅವರ ತಾಯಿ ಸೌದಾ ಅವರ ತಂದೆ ಇಬ್ರಾಹಿಂ ಹಾಜಿ 12 ದಿನಗಳ ಹಿಂದೆ ನಿಧನ ಹೊಂದಿದ್ದರು. ಈ ಸಂಬಂಧ ನಡೆದ ಕಾರ್ಯಕ್ರಮದಲ್ಲೂ ಮೊಹಮ್ಮದ್ ರಾಶಿದ್ ಭಾಗವಹಿಸಿದ್ದರು.